ಹೊಸದಿಗಂತ ಡಿಜಿಟಲ್ ಡೆಸ್ಕ್:
ಉರಿ: ಸರ್ಜಿಕಲ್ ಸ್ಟ್ರೈಕ್ ಸಿನಿಮಾ ಬಾಲಿವುಡ್‌ಗೆ ಯುವ ಸೂಪರ್‌ಸ್ಟಾರ್ ಅನ್ನು ನೀಡಿದ್ದು ಮಾತ್ರವಲ್ಲದೆ ಆಧುನಿಕ ಚಿತ್ರಗಳೊಂದಿಗೆ ಜನರಿಗೆ ಮನೋರಂಜನೆ ನೀಡಿದೆ. ಹಿಂದೆಂದೂ ನೋಡಿರದ ಹಿಟ್ ಸೀಕ್ವೆನ್ಸ್, ಛಾಯಾಗ್ರಹಣ, ಅದ್ಭುತ ನಿರ್ದೇಶನ ಮತ್ತು ಸಂಕಲನ ಪ್ರೇಕ್ಷಕರನ್ನು ಬೆರಗುಗೊಳಿಸಿದೆ.
ಐದು ವರ್ಷಗಳ ನಂತರ, ಆದಿತ್ಯ ಧರ್ ಅವರು ‘ಆರ್ಟಿಕಲ್ 370’ ಸಿನಿಮಾ ರಿಲೀಸ್ ಮಾಡಿದ್ದಾರೆ. ಇಂದು ಆರ್ಟಿಕಲ್ 370 ಮೂವಿ ಬಿಡುಗಡೆಯಾಗಿದ್ದು ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಚಿತ್ರದಲ್ಲಿ ಯಾಮಿ ಗೌತಮ್ ರಾಷ್ಟ್ರೀಯ ತನಿಖಾ ಸಂಸ್ಥೆ ಏಜೆಂಟ್ ಆಗಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಅರುಣ್ ಗೋವಿಲ್, ವೈಭವ್ ತತ್ವವಾಡಿ, ಸ್ಕಂದ್ ಠಾಕೂರ್, ಅಶ್ವಿನಿ ಕೌಲ್, ಮತ್ತು ಕಿರಣ್ ಕರ್ಮಾಕರ್, ಇತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ.