ಮನೆಯಿಂದ ಮಕ್ಕಳನ್ನು ಹೊರಗೆ ಕರ್ಕೊಂಡ್ ಹೋದ್ರೆ ದೃಷ್ಟಿಯಾಗೋದು ನಿಜಾನಾ?

ಸಾಮಾನ್ಯವಾಗಿ ಯಾವ ಪೋಷಕರು ವರ್ಷಕ್ಕಿಂತ ಚಿಕ್ಕ ಮಕ್ಕಳನ್ನು ಮನೆಯಿಂದ ಹೊರಗೆ ಕರೆದುಕೊಂಡು ಬರೋಕೆ ಇಷ್ಟ ಪಡೋದಿಲ್ಲ. ಅನಿವಾರ್ಯವಾಗಿ ಕರೆದುಕೊಂಡು ಬಂದರೂ ಒಂದು ನಿಮಿಷ ನೆಮ್ಮದಿಯಾಗಿ ಕೂರೋದಕ್ಕೂ ಮಕ್ಕಳು ಬಿಡೋದಿಲ್ಲ. ಕಿರಿಕಿರಿ, ಅಳು, ಏನು ಮಾಡಿದರೂ ಸಮಾಧಾನ ಆಗದೇ ಇರುವುದು, ಮತ್ತೆ ಮನೆಗೆ ಬಂದುಬಿಡೋಣ ಎನಿಸುವಂತೆ ಮಾಡುತ್ತಾರೆ.

ಮನೆಗೆ ಬಂದ ಪೋಷಕರು ಮಕ್ಕಳಿಗೆ ದೃಷ್ಟಿ ಆಗಿ ಅಳ್ತಿದ್ದಾರೆ ಅಂತ ಬೇರೆ ಬೇರೆ ರೀತಿಯಲ್ಲಿ ದೃಷ್ಟಿ ತೆಗೆಯುತ್ತಾರೆ. ಆದರೆ ಮಕ್ಕಳು ಕಿರಿಕಿರಿ ಮಾಡೋದ್ಯಾಕೆ?

ಮಕ್ಕಳು ಈಗಿನ್ನೂ ಈ ಜಗತ್ತಿಗೆ ಕಾಲಿಟ್ಟಿರುತ್ತಾರೆ. ಅವರಿಗೆ ಬೆಳಕು, ಶಬ್ದ, ಮಾಲಿನ್ಯ, ಬಿಸಿಲು, ಚಳಿ, ಮಳೆ ಎಲ್ಲದಕ್ಕೂ ಹೊಂದಿಕೊಳ್ಳಲು ಸಮಯ ಬೇಕು.

ಎರಡು ವರ್ಷಕ್ಕಿಂತ ಚಿಕ್ಕಮಕ್ಕಳು ಓವರ್ ಸೆನ್ಸಿಟಿವ್ ಆಗಿರುತ್ತಾರೆ. ಫಂಕ್ಷನ್‌ಗಳಲ್ಲಿ ಜನರ ಕಿರಿಕಿರಿ, ಬಟ್ಟೆಯಿಂದ ಸೆಕೆ, ಮದುವೆ ಮನೆ ಸದ್ದು ಹೀಗೆ ಸಣ್ಣಪುಟ್ಟದ್ದೂ ಕಿರಿಕಿರಿ ಮಾಡುತ್ತದೆ. ಮನೆಗೆ ಬಂದ ನಂತರವೂ ಈ ಕಿರಿಕಿರಿ ಸ್ವಲ್ಪ ಸಮಯದ ನಂತರ ನಡೆಯುತ್ತಿದೆ. ಹಾಗಾಗಿ ಹೆದರಬೇಕಿಲ್ಲ, ಅವರಿಗೂ ಜೀವನಕ್ಕೆ ಅಡ್ಜಸ್ಟ್ ಆಗಲು ಸ್ವಲ್ಪ ಸಮಯ ಬೇಕಲ್ವಾ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!