ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಜ್ಯೋತಿಕಾ, ಅಜಯ್ ದೇವಗನ್ ಹಾಗೂ ಮಾಧವನ್ ನಟಿಸಿರುವ ಶೈತಾನ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಎಲ್ಲೆಡೆ ವೈರಲ್ ಆಗಿದೆ.
ಈಗಾಗಲೇ ದೃಶ್ಯಂ ಸಿನಿಮಾದಲ್ಲಿ ಮಗಳನ್ನು ಕಾಪಾಡುವ ತಂದೆಯಾಗಿ ಕಾಣಿಸಿದ್ದ ಅಜಯ್‌ಗೆ ಮತ್ತದೇ ರೀತಿಯ ರೋಲ್ ಸಿಕ್ಕಿದೆ.
ಇದರಲ್ಲಿ ಮಾಧವನ್ ವಿಲನ್ ಆಗಿದ್ದು, ವಶೀಕರಣದ ಸುತ್ತ ಸಿನಿಮಾ ನಡೆದಿದೆ. ಸ್ವಲ್ಪ ಹೊತ್ತು ಫೋನ್ ಚಾರ್ಜ್‌ಮಾಡಿಕೊಂಡು ಹೋಗುತ್ತೇನೆ ಎಂದು ಮನೆಗೆ ಬಂದ ವ್ಯಕ್ತಿಯೊಬ್ಬ ಅಜಯ್ ಮಗಳನ್ನು ವಶೀಕರಣ ಮಾಡುತ್ತಾನೆ.
ನಂತರ ಏನೇನೆಲ್ಲಾ ಆಗುತ್ತದೆ, ಕಡೆಗೆ ಮಗಳನ್ನು ಕುಟುಂಬವನ್ನು ರಕ್ಷಿಸಿಕೊಳ್ತಾರಾ ಎನ್ನುವ ಕಥಾಹಂದರ ಕಾಣಿಸಿದೆ. ಟ್ರೇಲರ್ ನೋಡಿಯೇ ಭಯ ಬಿದ್ದಿರುವ ಫ್ಯಾನ್ಸ್ ಸಿನಿಮಾ ಯಾವಾಗ ರಿಲೀಸ್ ಎಂದು ಕಾದಿದ್ದಾರೆ.