ಮಾಲ್ಡೀವ್ಸ್‌ ಕಡಲತೀರ ತಲುಪಿದ ಚೀನಾ ಬೇಹುಗಾರಿಕಾ ಹಡಗು: ಭಾರತ, ಶ್ರೀಲಂಕಾದಿಂದ ಸಮರಾಭ್ಯಾಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಿಂದ ಶಂಕಿತ ಬೇಹುಗಾರಿಕಾ ಹಡಗು ಮಾಲ್ಡೀವ್ಸ್‌ನ ಮಾಲೆ ತೀರದ ಸಮೀಪಕ್ಕೆ ತಲುಪಿದ್ದು, ಕೆಲವು ದಿನಗಳ ಕಾಲ ಇಲ್ಲೇ ಲಂಗರು ಹಾಕಲಿದೆ.

ಇತ್ತ ಇದರ ಬೆನ್ನಲ್ಲೇ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನ ನೌಕಾಪಡೆಗಳು ಜಂಟಿ ಸಮರಾಭ್ಯಾಸ ಆರಂಭಿಸಿವೆ.

ಚೀನಾದ ಹಡಗು ಕ್ಸಿಯಾಂಗ್‌ ಯಾಂಗ್‌ ಹಾಂಗ್‌-03 ಗುರುವಾರ ಮಧ್ಯಾಹ್ನ ಮಾಲೆ ಬಂದರಿಗೆ ತಲುಪಿದೆ ಎಂದು ಹಡಗುಗಳ ಮೇಲೆ ನಿಗಾ ಇಡುವ ಎಡಿಟಿಯಾನ್‌ ವೆಬ್‌ಸೈಟ್‌ ವರದಿ ಮಾಡಿದೆ. ಈ ಹಡಗು ಮಾಲ್ಡೀವ್ಸ್‌ನಲ್ಲಿ ಲಂಗರು ಹಾಕುವುದಕ್ಕಾಗಿ ಜ.23ರಂದು ಸರ್ಕಾರ ಅನುಮತಿ ನೀಡಿತ್ತು. ಸಮುದ್ರದ ಬಗ್ಗೆ ಅಧ್ಯಯನ ಮಾಡುವುದಕ್ಕಾಗಿ ಈ ಸಂಶೋಧನಾ ಹಡಗನ್ನು ಕಳುಹಿಸಲಾಗಿದೆ ಎಂದು ಚೀನಾ ಹೇಳಿದ್ದರೂ ಸಹ ಇದೊಂದು ಬೇಹುಗಾರಿಕಾ ಹಡಗು ಆಗಿರಬಹುದು ಎಂಬ ಕಾರಣಕ್ಕೆ ನೆರೆಯ ದೇಶಗಳು ಇದರ ಮೇಲೆ ಕಣ್ಣಿಟ್ಟಿವೆ.

ಮಾಲ್ಡೀವ್ಸ್‌ ಕೋಸ್ಟ್‌ಗಾರ್ಡ್‌, ಭಾರತ ಮತ್ತು ಶ್ರೀಲಂಕಾದ ನೌಕಾಪಡೆಗಳು ‘ದೋಸ್ತಿ-16’ ಹೆಸರಿನಲ್ಲಿ ಜಂಟಿ ಸಮರಾಭ್ಯಾಸವನ್ನು ಗುರುವಾರ ಆರಂಭಿಸಿವೆ. ಇದು ಫೆ.25ರವರೆಗೆ ಮುಂದುವರೆಯಲಿದೆ. ಪರಸ್ಪರ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಸೇನಾ ಸಹಭಾಗಿತ್ವವನ್ನು ಉತ್ತಮಪಡಿಸಿಕೊಳ್ಳಲು ಈ ಅಭ್ಯಾಸವನ್ನು ಕೈಗೊಳ್ಳಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!