ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತಾರದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸಮ್ಮೇಳನದ ಕಾರ್ಯಾಧ್ಯಕ್ಷ ವಿನೋದ್ ಕುಲಕರ್ಣಿ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರು ದಾಳಿ ನಡೆಸಿರುವುದು ನಗರದಲ್ಲಿ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕ ಸ್ಥಳದಲ್ಲೇ ಅವರನ್ನು ಅಡ್ಡಗಟ್ಟಿ ಕಣ್ಣು ಹಾಗೂ ಮುಖದ ಭಾಗಕ್ಕೆ ಕಪ್ಪು ಬಣ್ಣದ ಪುಡಿ ಎರಚಿ, ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದಾಳಿಯಿಂದ ಕುಲಕರ್ಣಿ ಅವರ ಕಣ್ಣಿಗೆ ಗಾಯವಾಗಿದ್ದು, ತಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಅವರು ಮತ್ತೆ ಸಮ್ಮೇಳನದ ಸ್ಥಳಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಗಮನ ಸೆಳೆದಿದೆ. ದಾಳಿಯ ಸಂದರ್ಭ ದಾಳಿಕೋರ ಆಯುಧ ಹಿಡಿದಿರುವಂತೆ ಕಂಡುಬಂದಿದ್ದಾನೆ ಹಾಗೂ ಜೀವ ಬೆದರಿಕೆ ಹಾಕಿದ್ದಾನೆ ಎಂದು ಕುಲಕರ್ಣಿ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: FOOD | ಡ್ರೈ ಫ್ರೂಟ್ಸ್ ಚಾಟ್ಸ್, ರುಚಿ ಹೇಗಿದೆ ನೀವೇ ನೋಡಿ
ಘಟನೆ ಬಳಿಕ ಸ್ಥಳೀಯ ಪತ್ರಕರ್ತರ ಮನವಿಯ ಮೇರೆಗೆ ಪೊಲೀಸ್ ಇಲಾಖೆ ತಕ್ಷಣ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ವಿನೋದ್ ಕುಲಕರ್ಣಿ ಮತ್ತು ಸಾಹಿತ್ಯ ಮಹಾಮಂಡಲದ ಅಧ್ಯಕ್ಷ ಪ್ರೊ. ಮಿಲಿಂದ್ ಜೋಶಿ ಅವರಿಗೆ ಸಶಸ್ತ್ರ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿದೆ. ದಾಳಿಯ ಹಿಂದಿನ ಉದ್ದೇಶ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


