ಹೊಸದಿಗಂತ ಮಂಗಳೂರು:
ಉಡುಪಿ ಜಿಲ್ಲೆಯ ಜನತೆಯ ಬಹುಕಾಲದ ಕನಸೊಂದು ನನಸಾಗುವ ಹಂತದಲ್ಲಿದೆ. ಬಹು ನಿರೀಕ್ಷಿತ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಮತ್ತಷ್ಟು ವೇಗ ಸಿಕ್ಕಿದ್ದು, ಇದಕ್ಕೆ ಸಂಬಂಧಿಸಿದ ಸ್ಟೀಲ್ ಬ್ರಿಡ್ಜ್ ಗರ್ಡರ್ಗಳು ಇಂದು ಉಡುಪಿ ತಲುಪಲಿದೆ.
ಹುಬ್ಬಳ್ಳಿಯ ರೈಲ್ವೆ ಇಂಜಿನಿಯರಿಂಗ್ ವಿಭಾಗದಲ್ಲಿ ತಯಾರಾಗಿರುವ ಈ ಗರ್ಡರ್ಗಳಿಗೆ ಡಿಆರ್ಡಿಒ ಪರಿಶೀಲನೆ ಬಳಿಕ ಅನುಮೋದನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಅವುಗಳು ಕಳೆದ ರಾತ್ರಿ ಟ್ರಕ್ಗಳ ಮೂಲಕ ಹೊರಟಿದ್ದು, ಇಂದು ಕೃಷ್ಣನೂರು ತಲುಪಲಿದೆ.
ಇನ್ನು ಅಂತಿಮ ಕಾಮಗಾರಿ ಆರಂಭಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳಿಂದ ಸ್ಥಳ ಪರಿಶೀಲನೆ ಬಾಕಿ ಉಳಿದಿದ್ದು, ಇದು ಕೂಡಾ ಪೂರ್ಣಗೊಂಡು ಕಾಮಗಾರಿ ಶೀಘ್ರವೇ ಆರಂಭವಾಗಲಿದೆ.