ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್‌ನಲ್ಲಿ ಮದುವೆಯ ಉದ್ದೇಶದಿಂದ ಉದ್ಯಮಿಯೊಬ್ಬರು ಮ್ಯೂಸಿಕ್ ಟಿವಿ ಚಾನೆಲ್ ನಿರೂಪಕನನ್ನು ಅಪಹರಿಸಿದ ಘಟನೆ ನಡೆದಿದೆ.
ಇದೀಗ ಪ್ರಸ್ತುತ ಆರೋಪಿ ಮಹಿಳೆಯನ್ನು ಪೊಲೀಸರು ಕಸ್ಟಡಿಯಲ್ಲಿರಿಸಿದ್ದಾರೆ. ಮಹಿಳೆಗೆ ಸಹಾಯ ಮಾಡಿದ ನಾಲ್ವರನ್ನು ಕೂಡ ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ ಮಹಿಳೆ ಟಿವಿ ನಿರೂಪಕನನ್ನುಅಪಹರಿಸಲು ಆತನ ಕಾರಿನಲ್ಲಿ ಅವನ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಟ್ರ್ಯಾಕಿಂಗ್ ಸಾಧನವನ್ನು ಅಳವಡಿಸಿದ್ದಳು ಎನ್ನಲಾಗಿದೆ.