ಮನೆಯಲ್ಲೇ ಟ್ರೈ ಮಾಡಿ ಚೀಸ್ ಚಿಕನ್ ಬರ್ಗರ್, ಇಲ್ಲಿದೆ ರೆಸಿಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

 

ಇಂದಿನ ಜನರೇಶನ್ ನಲ್ಲಿ ಪಿಜ್ಜಾ, ಬರ್ಗರ್ ಬಹಳ ಅಚ್ಚು, ಮೆಚ್ಚಿನ ಜಂಕ್ ಫುಡ್ ಆಗಿದೆ. ತುಂಬ ಜನರಿಗೆ ಬರ್ಗರ್ ಅಂದ್ರೆ ಸಕತ್ ಇಷ್ಟಪಟ್ಟು ತಿನ್ನುತ್ತಾರೆ. ಆದ್ರೆ ಈ ಬರ್ಗರ್ ಅನ್ನು ನೀವೇ ಮನೆಯಲ್ಲಿ ಮಾಡಿ ಸವಿದರೆ ಹೇಗೆ ಇರುತ್ತೆ. ಹಾಗಾದ್ರೆ ನಿಮ್ಮ ನೆಚ್ಚಿನ ಚಿಕನ್ ಚೀಸ್ ಬರ್ಗರ್ ಅನ್ನು ಮನೆಯಲ್ಲಿ ಮಾಡಿ ಸವಿಯಿರಿ.

Mouthwatering Ground Chicken Burger Recipe: Simple and Tasty - Theresa  Reviews

ಬೇಕಾಗುವ ಸಾಮಗ್ರಿಗಳು:

ಚಿಕನ್ ಖೀಮಾ – 100 ಗ್ರಾಂ
ಬರ್ಗರ್ ಬನ್ – 4
ಬ್ರೆಡ್ ಕ್ರಂಬ್ಸ್ – 1 ಕಪ್
ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
ಟೊಮೆಟೋ – 2
ಈರುಳ್ಳಿ – 2
ಮಯೋನೀಸ್ – 2 ಚಮಚ
ಬೆಣ್ಣೆ – 2 ಚಮಚಮ
ಟೊಮೆಟೋ ಕೆಚಪ್ – 1 ಕಪ್
ಚೀಸ್ – 4
ಎಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕಾಳುಮೆಣಸಿನ ಪುಡಿ – ಅರ್ಧ ಚಮಚ
ಕೊತ್ತಂಬರಿ ಪುಡಿ – 1 ಚಮಚ

Juicy Chicken Burger Recipe - Leahclarkva

ಚೀಸ್ ಚಿಕನ್ ಬರ್ಗರ್ ಮಾಡುವ ವಿಧಾನ:

ಒಂದು ಬೌಲ್ ಗೆ ಖೀಮಾ ಮತ್ತು ಟೋಸ್ಟ್ ಪೌಡರ್ ಹಾಕಿ ಚೆನ್ನಾಗಿ ಕಲಸಿ. ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕಾಳುಮೆಣಸಿನ ಪುಡಿ, ಈರುಳ್ಳಿ, ಕೊತ್ತಂಬರಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಅದನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಒಂದು ತಟ್ಟೆಯಲ್ಲಿ ತುಪ್ಪ ಸವರಿ ರೋಲ್ನಂತೆ ಮಾಡಿ ಪಕ್ಕಕ್ಕೆ ಇಡಿ.
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಮಧ್ಯಮ ಉರಿಯಲ್ಲಿ ಮಿಶ್ರಣವನ್ನು ಫ್ರೈ ಮಾಡಿ. ಎರಡೂ ಬದಿಗಳು ಬಹುತೇಕ ಕಂದು ಬಣ್ಣ ಬರುವವರೆಗೆ ಬೇಯಿಸಿ. ಹದಿನೈದು ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ.
ಈಗ ಒಂದು ಕಪ್ ಗೆ ಮೇಯನೇಸ್ ಮತ್ತು ಟೊಮೆಟೊ ಕೆಚಪ್ ಹಾಕಿ ಮಿಶ್ರಣ ಮಾಡಿ.
ಈಗ ರೋಲ್‌ಗಳನ್ನು ಕತ್ತರಿಸಿ ಎರಡು ತುಂಡುಗಳಾಗಿ ತಯಾರಿಸಿ. ಅದಕ್ಕೆ ಬೆಣ್ಣೆಯೊಂದಿಗೆ ಗ್ರೀಸ್ ಮಾಡಿ ಮತ್ತು ಕಡಿಮೆ ಉರಿಯಲ್ಲಿ ಬಿಸಿ ಮಾಡಿ.
ಬನ್ ಬಿಸಿಯಾದ ನಂತರ, ಮೊದಲು ಬನ್‌ನ ಕೆಳಭಾಗದಲ್ಲಿ ಮೇಯನೇಸ್ ಮತ್ತು ಕೆಚಪ್ ಮಿಶ್ರಣವನ್ನು ಹರಡಿ, ಮೇಲೆ ಟೊಮ್ಯಾಟೊ ಮತ್ತು ಈರುಳ್ಳಿಯನ್ನು ಜೋಡಿಸಿ ಮತ್ತು ಮೇಲೆ ಚೀಸ್ ಸಿಂಪಡಿಸಿ. ಮೇಲೆ ಹುರಿದ ಚಿಕನ್ ಖೈಮಾವನ್ನು ಇರಿಸಿ. ಬನ್‌ನ ಮೇಲ್ಭಾಗವನ್ನು ಇನ್ನೊಂದು ಬನ್ ಇಂದ ಮುಚ್ಚಿ. ಇದೀಗ ರುಚಿಯಾದ ಟೇಸ್ಟಿ ಚಿಕನ್ ಚೀಸ್ ಬರ್ಗರ್ ಅನ್ನು ಮನೆಯವರೊಂದಿಗೆ ಸವಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here