ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ಭಾರತದ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಸಂವಿಧಾನವನ್ನು ಪಾಲಿಸಿದರೆ ನಾವೆಲ್ಲರೂ ಬದುಕಬಹುದು. ಸಂವಿಧಾನ ಉಲ್ಲಂಘಿಸಿದರೆ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಕೃಷ್ಣ ವಿಹಾರ್ ಅರಮನೆಯಲ್ಲಿ ಸಂವಿಧಾನ ಜಾಗೃತಿ ಸಮಾವೇಶದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಕಳೆದಿದ್ದು, ಸಂವಿಧಾನದ ಪೀಠಿಕೆಯನ್ನು ಜನರು ತಿಳಿದುಕೊಳ್ಳಬೇಕು. ದಲಿತರಿಗೆ ಸಹಾಯ ಮಾಡಲು ಸಂವಿಧಾನ ರಚಿಸಲಾಗಿದೆ.
ಸಾಂವಿಧಾನಿಕ ಪ್ರಚಾರವು 1950 ರಲ್ಲಿ ಪ್ರಾರಂಭವಾಯಿತು. ಆದರೆ ಅಸಮಾನತೆ ಕಡಿಮೆಯಾಗಿಲ್ಲ. ಅಸಮಾನತೆ ನಿವಾರಿಸುವುದು ಸರಕಾರದ ಕರ್ತವ್ಯ ಎಂದು ಕಿವಿ ಮಾತು ಹೇಳಿದರು.