Saturday, January 10, 2026

ಒಂದೇ ವರ್ಷ, ಎರಡು ಸೂಪರ್ ಹಿಟ್, 2000 ಕೋಟಿ ಕಲೆಕ್ಷನ್: ಅಕ್ಷಯ್ ಖನ್ನಾ ಪರ್ವ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಪ್ರತಿಭಾವಂತ ನಟ ಅಕ್ಷಯ್ ಖನ್ನಾ ಅವರಿಗೆ 2025ರ ವರ್ಷವು ವೃತ್ತಿಜೀವನದ ಮೈಲಿಗಲ್ಲಾಗಿ ಪರಿಣಮಿಸಿದೆ. ನಾಯಕನಾಗಿ, ಪೋಷಕ ನಟನಾಗಿ ಮಿಂಚಿದ್ದ ಅಕ್ಷಯ್, ಈಗ ‘ಖಳನಾಯಕ’ನಾಗಿ ಅಬ್ಬರಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಒಂದೇ ವರ್ಷದಲ್ಲಿ ಅವರು ನಟಿಸಿದ ಸಿನಿಮಾಗಳು ಬರೋಬ್ಬರಿ 2,000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿವೆ.

ಫೆಬ್ರವರಿ 14ರಂದು ತೆರೆಕಂಡ ಐತಿಹಾಸಿಕ ಸಿನಿಮಾ ‘ಛಾವ’ ಚಿತ್ರದಲ್ಲಿ ಔರಂಗಜೇಬ್ ಪಾತ್ರಕ್ಕೆ ಅಕ್ಷಯ್ ಖನ್ನಾ ಜೀವ ತುಂಬಿದ್ದರು. ವಿಕ್ಕಿ ಕೌಶಲ್ ನಾಯಕನಾಗಿದ್ದ ಈ ಸಿನಿಮಾ ವಿಶ್ವಾದ್ಯಂತ 809 ಕೋಟಿ ರೂ. ಗಳಿಸಿ ದಾಖಲೆ ಬರೆಯಿತು. ಇದಾದ ಬಳಿಕ ಡಿಸೆಂಬರ್ 5ರಂದು ಬಿಡುಗಡೆಯಾದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರದಲ್ಲಿ ‘ರೆಹಮಾನ್ ಡಕಾಯಿತ್’ ಎಂಬ ಕ್ರೂರ ವಿಲನ್ ಪಾತ್ರದ ಮೂಲಕ ಅಕ್ಷಯ್ ಮತ್ತೆ ಅಬ್ಬರಿಸಿದರು. ಈ ಚಿತ್ರ ಈಗಾಗಲೇ 1167 ಕೋಟಿ ರೂ. ಗೂ ಅಧಿಕ ಗಳಿಕೆ ಕಂಡಿದ್ದು, ಶೀಘ್ರದಲ್ಲೇ 1200 ಕೋಟಿ ರೂ. ತಲುಪುವ ನಿರೀಕ್ಷೆಯಿದೆ.

ಒಂದೇ ವರ್ಷದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಅಕ್ಷಯ್ ಖನ್ನಾ ಈಗ ಎರಡನೇ ಸ್ಥಾನಕ್ಕೇರಿದ್ದಾರೆ.

error: Content is protected !!