ಬಿ.ಟೆಕ್ ವಿದ್ಯಾರ್ಥಿಯ ಬರ್ಬರ ಹತ್ಯೆ: ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಹೊರವಲಯದ ಆನೇಕಲ್ಲಿನ ಕಾಳನಾಯಕನಹಳ್ಳಿ ಬಳಿ ಬಿ.ಟೆಕ್ ವಿದ್ಯಾರ್ಥಿಯನ್ನು ಬರ್ಬರವಾಗಿ ಕೊಲೆ ಮಾಡಿ ಸುಟ್ಟು ಹಾಕಿರುವ ಘಟನೆ ನಡೆದಿದೆ.

ಹರ್ಷಿತ್ ಕೊಂಟಾಳ ಕೊಲೆಯಾದ ಬಿ.ಟೆಕ್ ವಿದ್ಯಾರ್ಥಿ. ಆನೇಕಲ್‌ನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದರು. ಫೆಬ್ರವರಿ 22ರಂದು ಹರ್ಷಿತ್ ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದು, ಈ ಸಂಬಂಧ ಪೊಲೀಸ್ ಇಲಾಖೆಗೆ ದೂರು ನೀಡಲಾಗಿತ್ತು. ಹಾಸ್ಟೆಲ್ ಹೊರಗೆ ನೋಡಿದ ವಿಡಿಯೋ ಸಮೇತ ಆಡಳಿತ ಸಮಿತಿ ದೂರು ದಾಖಲಿಸಿತ್ತು.

ಭಾನುವಾರ ಬೆಳಗ್ಗೆ ಆನೇಕಲ್ಲಿನ ಕಾಳನಾಯಕನಹಳ್ಳಿ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಆನೇಕಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here