ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಎಸ್ಸೆಸೆಲ್ಸಿ, ಹೈಯರ್ ಸೆಕೆಂಡರಿ, ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷೆಗಳು ಹತ್ತಿರವಾಗುತ್ತಿದ್ದು, ಪರೀಕ್ಷೆಗಳ ಸಂದರ್ಭ ಮಕ್ಕಳು ಒತ್ತಡ, ಖಿನ್ನತೆಗೆ ಒಳಗಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆ ‘ವಿ ಹೆಲ್ಪ್’ ಹೆಸರಿನ ಶುಲ್ಕ ರಹಿತ ದೂರವಾಣಿ ಸಹಾಯ ಕೇಂದ್ರ ಆರಂಭಿಸಿದೆ.
1800 425 2844 ಸಂಖ್ಯೆಯಲ್ಲಿ ಬೆಳಿಗ್ಗೆ7 ರಿಂದ ಸಂಜೆ 7 ರವರೆಗೆ ಲಭ್ಯವಿರುವ ಈ ಸಹಾಯ ಕೇಂದ್ರದಲ್ಲಿ ವಿದ್ಯಾರ್ಥಿಗಳು, ಪೋಷಕರಿಗೆ ಸಮಾಲೋಚನೆಯ ನೆರವು, ಅಗತ್ಯವಿದ್ದಲ್ಲಿ ಕೌನ್ಸೆಲಿಂಗ್ ಕೂಡಾ ಲಭ್ಯವಿದೆ. ಈ ಸಹಾಯ ಕೇಂದ್ರವು ಪರೀಕ್ಷೆಗಳು ಮುಗಿಯುವವರೆಗೆ ವಾರದ ಎಲ್ಲಾ ಕೆಲಸದ ದಿನಗಳಲ್ಲಿ ಉಚಿತವಾಗಿ ಸೇವೆಗೆ ಲಭ್ಯವಿದೆ.