ಹೊಸದಿಗಂತ ವರದಿ, ಬಾಗಲಕೋಟೆ (ಜಮಖಂಡಿ)
ಅಪ್ರಾಪ್ತ ಬಾಲಕ ಬಾಲಕಿಯರು ದ್ವಿಚಕ್ರ ವಾಹನ ಚಲಾಯಿಸುತ್ತಿರುವದು ಅತಿಯಾಗಿ ಕಂಡು ಬಂದಿದ್ದು ಅದರಿಂದಾಗುವ ಅಪಘಾತಗಳನ್ನು ನಿಯಂತ್ರಿಸಲು ಇಂದು ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಾಲಾಯಿಸಲು ಅವಕಾಶ ನೀಡಿದ ವಾಹನ ಮಾಲೀಕನಿಗೆ ರೂ ೨೫,೦೦೦ ದಂಡವನ್ನು ಅಧಿಕಾರಿಗಳು ವಿಧಿಸಿದ್ದಾರೆ.
ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹುಲ್ಯಾಳ ಕ್ರಾಸ್ ಬಳಿ ಅಪ್ರಾಪ್ತ ಬಾಲಕನೊಬ್ಬನು ಕೆಎ೪೮ಇಡಿ೭೬೦೩ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ಹೆಲ್ಮೆಟ್ ಧರಿಸದೆ, ವಾಹನ ಚಾಲನಾ ಪರವಾನಿಗೆಯನ್ನು ಹೊಂದಿರದೆ ಚಾಲನೆ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದು, ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರದ ಲಿಂಗನೂರು ಗ್ರಾಮದ ಸಚಿನ್ ರಾಮಪ್ಪ ರಾಠೋಡ್, (೨೫) ಇವರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣಾಧಿಕಾರಿ ಮಹೇಶ್ ಸಂಖ ಲಘು ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ದೋಷರೋಪಣಾ ವರದಿಯನ್ನು ಸಲ್ಲಿಸಿದ್ದು, ಪ್ರಿನ್ಸಿಪಲ್ ಸಿವಿಲ್, ಜೆ.ಎಮ್.ಎಫ್.ಸಿ ನ್ಯಾಯಧೀಶರು ದ್ವಿಚಕ್ರ ವಾಹನ ಮಾಲೀಕ ಸಚಿನ್ ರಮೇಶ್ ರಾಠೋಡ್ರಿಗೆ ರೂ ೨೫,೦೦೦ ದಂಡ ವಿಧಿಸಿದ್ದಾರೆ ಎಂದು ಜಿಲ್ಲಾ ಪೋಲೀಸ ಅಧೀಕ್ಷಕ ಅಮರನಾಥ್ ರೆಡ್ಡಿ ತಿಳಿಸಿದ್ದಾರೆ.