ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯನಾಡಿನಲ್ಲಿ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಕರ್ನಾಟಕದಿಂದ 15 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಇದೀಗ ಕರ್ನಾಟಕದ ಹಣ ಬೇಡ ಎಂದು ಮೃತರ ಕುಟುಂಬ ಹೇಳಿದೆ.
ಕೇರಳದಲ್ಲಿ ಆನೆ ದಾಳಿಯಿಂದ ವ್ಯಕ್ತಿ ಮೃತಪಟ್ಟರೆ ಕರ್ನಾಟದಿಂದ ಏಕೆ ಹಣ ನೀಡಬೇಕು ಎಂದು ಚರ್ಚೆಗಳಾಗಿದ್ದವು. ನಮ್ಮ ರಾಜ್ಯದಲ್ಲಿ ಆನೆ ತುಳಿತದ ಸಾವಿಗೆ ಐದು ಲಕ್ಷ ನೀಡಲು ಕಷ್ಟಪಡುವ ಸರ್ಕಾರ ಹಿರಿಯ ನಾಯಕರನ್ನು ಮೆಚ್ಚಿಸಲು ಈ ರೀತಿ ಮಾಡಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು.
ಈ ಎಲ್ಲ ಬೆಳವಣಿಗೆಗಳನ್ನು ಕಂಡು ಸಂತ್ರಸ್ತರ ಕುಟುಂಬ ನಿಮ್ಮ ಪರಿಹಾರ ಹಣವೇ ಬೇಡ ಎಂದು ಹೇಳಿದೆ.