ಹೊಸದಿಗಂತ ವರದಿ, ಆಲೂರು:
ಹಾಸನದಿಂದ ಬಿಕ್ಕೋಡು ಗ್ರಾಮಕ್ಕೆ ಆಲೂರು ಮಾರ್ಗವಾಗಿ ಫೆ. ೨೮ ರಿಂದ ಸಂಜೆ ೫.೪೫ ಕ್ಕೆ ಹಾಸನ ಹಳೆ ಬಸ್ ನಿಲ್ದಾಣದಿಂದ ಸಾರಿಗೆ ಬಸ್ ಹೊರಡಲಿದೆ ಎಂದು ಜಿಲ್ಲಾ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಆಲೂರಿನಿಂದ ಬಿಕ್ಕೋಡು ಮಾರ್ಗದಲ್ಲಿ ಸಂಜೆ ೫ ರ ನಂತರ ಸಂಚರಿಸಲು ಯಾವುದೆ ಬಸ್ ಸೌಕರ್ಯ ಇರಲಿಲ್ಲ. ಈ ಮಾರ್ಗ ಕಾಡಾನೆಗಳ ಹಾವಳಿ ಪ್ರದೇಶವಾದ್ದರಿಂದ ಜನಸಾಮಾನ್ಯರು ಭಯಭೀತಿಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ, ಆಲೂರಿನಿಂದ ಸಂಜೆ ೬ ಗಂಟೆ ವೇಳೆಗೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲು ಕೋರಿ ಸಾರಿಗೆ ಇಲಾಖೆಗೆ ಮನವಿ ಮಾಡಲಾಗಿತ್ತು.
ಮನವಿಯನ್ನು ಪರಿಗಣಿಸಿದ ಇಲಾಖೆ ಫೆ. ೨೮ ರಿಂದ ಹಾಸನ ಹಳೆ ಬಸ್ ನಿಲ್ದಾಣದಿಂದ ಸಂಜೆ ೫.೪೫ ಕ್ಕೆ ಹೊರಟು ಅಲೂರು ಮಾರ್ಗವಾಗಿ ಬಿಕ್ಕೋಡು ತಲುಪಲಿದೆ ಎಂದು ತಿಳಿಸಿದ್ದಾರೆ ಇಲಾಖೆ ಸಹಕಾರಕ್ಕೆ ಪ್ರಯಾಣಿಕರು ಅಭಿನಂದನೆ ಸಲ್ಲಿಸಿದ್ದಾರೆ.