ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಇದೀಗ ಇಡೀ ರಾಜ್ಯವನ್ನೇ ಕೆರಳುವಂತೆ ಮಾಡಿದೆ. ಕಾಂಗ್ರೆಸ್ ಸದಸ್ಯರು ಕೂಗಿದ ಈ ಒಂದು ಘೋಷಣೆ ಎಲ್ಲೆಡೆ ಮಹತ್ವದ ಚರ್ಚೆಗೆ ಕಾರಣವಾಗುತ್ತಿದೆ. ಇದೀಗ ಈ ಕುರಿತು ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ.
ಪಾಕ್ ಪರ ಘೋಷವಾಕ್ಯ ಯಾರೇ ಹೇಳಿದರು ಅದು ತಪ್ಪೇ, ಆತ ದೇಶದ್ರೋಹಿ. ಅದರಲ್ಲಿ ಯಾವುದೇ ಸಂಶಯವಿಲ್ಲ. ಎಂದು ಹೇಳಿದ್ದಾರೆ.
ನಾಸೀರ್ ಹುಸೇನ್ ಅವರು ಪಾಕಿಸ್ತಾನಕ್ಕೆ ಜೈಕಾರ ಹಾಕಿಲ್ಲ ಎಂದು ಹೇಳಿದ್ದಾರೆ. ನಾಸೀರ್ ಸಾಬ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂದು ಹೇಳಿದ್ದಾರೆ. FSL ವರದಿಗಾಗಿ ವೀಡಿಯೊವನ್ನು ಕಳುಹಿಸಿದೆ. ಈ ಘೋಷಣೆ ಯಾರೇ ಕೂಗಿದರು ಅವರು ದೇಶದ್ರೋಹಿ ಎಂದು ಜಮೀರ್ ಹೇಳಿದ್ದಾರೆ.