ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲಿನಲ್ಲಿ ಗಾಂಜಾ ಬೆರೆಸಿ ಸಿಗರೇಟ್ ಸೇದುತ್ತಿರುವುದನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ಆರು ಯುವಕರು ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ವಿಚಾರಣೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗೆ ಚಾಕುವಿನಿಂದ ಇರಿದಿದ್ದಾರೆ.
ರೈಲಿನಲ್ಲಿ ಗಾಂಜಾ ಸೇದುವುದನ್ನು ವಿರೋಧಿಸಿದ ರೈಲ್ವೇ ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಲು ಈ ಯುವಕರ ಗುಂಪು ಮುಂದಾಗಿದೆ. ಈ ಕೃತ್ಯದಲ್ಲಿ ಗಾಯಗೊಂಡಿದ್ದ ರೈಲ್ವೇ ಪೊಲೀಸ್ ಪೇದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.