ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲ ದಿನಗಳ ಹಿಂದೆ ಕೊಳಕು ಬಟ್ಟೆ ಹಾಕಿದ್ದಾರೆಂದು ಮೆಟ್ರೋದಲ್ಲಿ ಪ್ರಯಾಣಿಸಲು ರೈತನಿಗೆ ಅನುಮತಿ ನಿರಾಕರಿಸಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕರ್ನಾಟಕ ಸರ್ಕಾರ ಹಾಗೂ ಮೆಟ್ರೋ ರೈಲು ನಿಗಮಕ್ಕೆ ನೊಟೀಸ್ ಜಾರಿ ಮಾಡಿದೆ.
ಬಟ್ಟೆಗಳು ಕೊಳಕಾಗಿದ್ದು, ಇತರರ ಪ್ರಯಾಣಿಕರಿಗೆ ಮುಜುಗರ ಆಗುತ್ತದೆ ಎನ್ನುವ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಈ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಾತನಾಡಿದ್ದು” ಯಾವುದೇ ವ್ಯಕ್ತಿ ಅಥವಾ ಆತ ಧರಿಸಿರುವ ಬಟ್ಟೆಗಳ ಆಧಾರದ ಮೇಲೆ ಸಾರ್ವಜನಿಕ ಸಾರಿಗೆಗೆ ಪ್ರವೇಶ ನಿರ್ಬಂಧಿಸುವಂತಿಲ್ಲ” ಎಂದು ಹೇಳಿದೆ.