ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದ ಸರ್ಕಾರಿ ವೀಕ್ಷಣಲಾಯದಲ್ಲಿದ್ದ ಮೂವರು ಮಕ್ಕಳು ಪರಾರಿಯಾಗಿದ್ದಾರೆ.
ಆಲ್ಕೊಳದ ವೀಕ್ಷಣಾಲಯದಲ್ಲಿದ್ದ 15-17 ವರ್ಷದ ಮೂವರು ರಾತ್ರಿ ಶೌಚಾಲಯದ ಕಿಟಕಿ ಒಡೆದು ಪರಾರಿಯಾಗಿದ್ದಾರೆ.
ಬಸ್ ಸ್ಟಾಂಡ್, ರೇಲ್ವೆ ಸ್ಟೇಷನ್ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಹುಡುಕಿದರೂ ಮಕ್ಕಳು ಸಿಕ್ಕಿಲ್ಲ.
ವಿನೋಬ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.