ಹೊಸದಿಗಂತ ವರದಿ, ಬಳ್ಳಾರಿ:
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಜೆ.ಎಸ್.ಆಂಜಿನೇಯಲು ಅವರು ನೇಮಕಗೊಂಡಿದ್ದಾರೆ.
ಈ ಕುರಿತು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಅವರು, ಅವಧಿಯಲ್ಲಿ ಮಾದರಿ ಕೆಲಸಗಳನ್ನು ನಿರ್ವಹಿಸಿ ಇತರರಿಗೆ ಮಾದರಿಯಾಗಿದ್ದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತರಾಗಿದ್ದ ಇವರು, ಮತ್ತೆ ಎರಡನೇ ಬಾರಿ ಬೂಡಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪಕ್ಷದಲ್ಲಿ ಸುಮಾರು ಮುಖಂಡರು ಬೂಡಾ ಅಧ್ಯಕ್ಷ ಗಾದಿಗೆ ಕಣ್ಣಿಟ್ಟಿದ್ದರು, ಆದರೆ, ವರಿಷ್ಠರು ಆoಜೀನೆಯಲು ಅವರನ್ನು ನೇಮಕ ಮಾಡುವ ಮೂಲಕ ತೆರೆ ಎಳೆದಿದ್ದಾರೆ.