ಬರದಂತೆ ತಡೆಯಲು ಚಿತ್ತಾಪುರ ಯಾರ ಆಸ್ತಿಯೂ ಅಲ್ಲ: ‘ನಮೋ ಭಾರತ’ದಲ್ಲಿ ಗುಡುಗಿದ ಚಕ್ರವರ್ತಿ ಸೂಲಿಬೆಲೆ!

ಹೊಸದಿಗಂತ, ಕಲಬುರಗಿ:
ತಾಲೂಕು ಬಿಜೆಪಿ ಹಾಗೂ ನಮೋ ಬ್ರಿಗೇಡ್ ಚಿತ್ತಾಪುರ ಆಶ್ರಯದಲ್ಲಿ ಗುರುವಾರ ಸಂಜೆ ಪಟ್ಟಣದ ಬಾಪುರಾವ ಕಲ್ಯಾಣ ಮಂಟಪದಲ್ಲಿ ನಮೋ ಭಾರತ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಕಾಯರಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಖ್ಯಾತ ವಾಗ್ಮಿ ಚಿಂತಕ ಚಕ್ರವರ್ತಿ ಸೂಲಿಬೆಲೆ, ಭವ್ಯ ಭಾರತ ಸಶಕ್ತ ಭಾರತಕ್ಕಾಗಿ ಮತ್ತೊಮ್ಮೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕೆಂದು ಕರೆ ನೀಡಿದರು.
ಮೋದಿ, ದೇಶದೊದ್ದಕ್ಕೂ ಹೈವೆ ರಸ್ತೆಗಳು, ಉದ್ದನೇಯ ಸೇತುವೆಗಳು, ಶಿಕ್ಷಣ ಕ್ಷೇತ್ರ ಆರೋಗ್ಯ ಕ್ಷೇತ್ರದಲ್ಲಿ ಕೇವಲ 9 ವರ್ಷದಲ್ಲಿ ಹೆಚ್ಚು ಸಾಧನೆ ಮಾಡಿ ದೇಶದ 140 ಕೋಟಿ ಜನರಿಗೆ ಕಲ್ಪಿಸಿದ್ದಾರೆ. ದೇಶದ ರಕ್ಷಣೆಗೆ ಮೋದಿ ಹೆಚ್ಚು ಒತ್ತು ನೀಡಿದ್ದಾರೆ. ಬಡವರು ಹಸಿವಿನಿಂದ ಬಳಲುಬಾರದು ಎಂದು ಅಕ್ಕಿ, ಬೇಳೆ ಕಾಳು ನೀಡಿದ್ದಾರೆ. 11 ಕೋಟಿ ಜನರಿಗೆ ಶೌಚಾಲಯ, 4 ಕೋಟಿ ಜನರಿಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ. ರೈಲು ಹಾಗೂ ವಿಮಾನ ಯಾನ ಸಂಪರ್ಕ ಹೆಚ್ಚು ಕಲ್ಪಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ 60 ವರ್ಷ ಆಳಿದರೂ ಸಮರ್ಪಕ ಸೌಲಭ್ಯಗಳು ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಕೇದಾರ, ವಾರಣಾಸಿ, ಉಜ್ಜಯನಿ ಹಲವು ಹಿಂದೂ ದೇವಾಲಯಗಳನ್ನು ಮೋದಿ ಅಭಿವೃದ್ಧಿ ಪಡಿಸಿದ್ದಾರೆ. ಜತೆಗೆ ಅನೇಕ ಅಭಿವೃದ್ಧಿ ಕೆಲಸಗಳು ಮಾಡಿದ್ದಾರೆ. ದೇಶ ಉನ್ನತ ಸ್ಥಾನಕ್ಕೆ ತಲುಪಿದೆ. ವಿಶ್ವದಲ್ಲಿ ಭಾರತ ೫ನೇ ಸ್ಥಾನದಲ್ಲಿದೆ. ರಾಹುಲ್ ಗಾಂಧಿ ಪ್ರಧಾನಿಯಾಗಲು ಯಾವುದೇ ಅರ್ಹತೆಯಿಲ್ಲ. ನರೇಂದ್ರ ಮೋದಿ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಆದ್ದರಿಂದ ಇನ್ನೂ ಹೆಚ್ಚಿನ ಸದೃಢ ದೇಶ ನಿರ್ಮಾಣ ಮೋದಿ ಅಗತ್ಯವಾಗಿದೆ ಎಂದು ಹೇಳಿದರು.

ಕಲಬುರಗಿ ಯಾರಪ್ಪನ ಆಸ್ತಿ ಅಲ್ಲ
ಕಲಬುರಗಿ ಯಾರ ಆಸ್ತಿಯಾಗಲಿ, ಅಪ್ಪ ಮಕ್ಕಳ ಆಸ್ತಿ ಆಗಲಿ ಅಲ್ಲ. ಇಲ್ಲಿನ ಸಚಿವ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರ ಪಟ್ಟಣಕ್ಕೆ ಬರದಂತೆ ಹತ್ತಿಕ್ಕಲು ಪ್ರಯತ್ನಿಸಿದರು. ಹೈಕೋರ್ಟ್ ಅವರಿಗೆ ಛೀಮಾರಿ ಹಾಕಿರುವುದರಿಂದ ಅಂಬೇಡ್ಕರ್‌ವರ ಸಂವಿಧಾನದಿಂದ ಇಂದು ಚಿತ್ತಾಪುರಕ್ಕೆ ಬಂದು ಉತ್ತರ ನೀಡಲು ಬಂದಿದ್ದೇನೆ. ಇವತ್ತಿನ ವಿಶೇಷ ಈ ಕಾರ್ಯಕ್ರಮ ಜಿಲ್ಲೆ ಅಷ್ಟೇ ಅಲ್ಲ. ರಾಜ್ಯ ಹಾಗೂ ದೆಹಲಿಗೂ ಗೊತ್ತಾಗಿದೆ ಎಂದು ಹೇಳಿದರು.

ಕೋಂಚುರ ಶ್ರೀ ಸವಿತಾನಂದ ಮಹಾಸ್ವಾಮಿಗಳು ನಮೋ ಭಾರತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಗೋಪಾಲ್ ರಾಠೋಡ್, ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಪೂಜಾರಿ, ವೀರಣ್ಣ ಯಾರಿ, ನಾಗುಬಾಯಿ ಜೀತುರೆ, ಕೋಟೇಶ್ವರ ರೇಶ್ಮಿ, ಸಂತೋಷ ಹಾವೇರಿ, ಶರಣಗೌಡ ಭೀಮನಹಳ್ಳಿ, ಚಂದ್ರಶೇಖರ ಅವಂಟಿ, ಶಿವುಕುಮಾರ್ ಸುಣಗಾರ, ಬಸವರಾಜ ಬೆಣ್ಣುರಕರ್, ಮಲ್ಲಿಕಾರ್ಜುನ ಎಮ್ಮೆನೋರ್, ಶರಣಪ್ಪ ತಳವಾರ್, ವಿಠಲ್ ನಾಯಕ್, ಸೋಮಶೇಖರ್ ಗೌಡ ಬೆಳಗುಂಪ, ಚನಣ್ಣ ಬಾಳಿ, ಸಂತೋಷ, ರಾಜಶೇಖರ್ ಕಡಲಿ ಇತ್ತರರು ಇದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!