ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದೆ.
ಒಟ್ಟಾರೆ 1,124 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇಂದಿನಿಂದ ಮಾರ್ಚ್ 22ರವರೆಗೆ ಪರೀಕ್ಷೆ ನಡೆಯಲಿದ್ದು, 6.98 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಬೆಳಗ್ಗೆ 10:30ಕ್ಕೆ ಪರೀಕ್ಷೆ ಆರಂಭವಾಗಿ 1:30ಕ್ಕೆ ಮುಕ್ತಾಯವಾಗಲಿದೆ. ಈ ಬಾರಿ 80 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, 20 ಅಂಕಗಳು ಆಂತರಿಕ ಪರೀಕ್ಷೆಗೆ ಮೀಸಲಿಡಲಾಗಿದೆ.
ಒಟ್ಟಾರೆ ಎರಡು ಸಾವಿರಕ್ಕೂ ಹೆಚ್ಚು ಉಪನ್ಯಾಸಕರನ್ನು ಪ್ರಶ್ನೆಪತ್ರಿಕೆಗಳ ಮೇಲೆ ಗಮನ ಇಡಲು ಹಾಗೂ ನಾಲ್ಕು ಸಾವಿರ ಉಪನ್ಯಾಸಕರನ್ನು ವಿಚಕ್ಷಣ ದಳಕ್ಕೆ ನಿಯೋಗಿಸಲಾಗಿದೆ. ಪ್ರತೀ ಕೇಂದ್ರದಲ್ಲೂ ನಾಲ್ವರು ಪೊಲೀಸರನ್ನು ನಿಯೋಜಿಸಲಾಗಿದೆ.
ಪರೀಕ್ಷಾ ಕೇಂದ್ರದ ಸುತ್ತಮುತ್ತ ಪರೀಕ್ಷೆ ಮುಗಿಯುವವರೆಗೂ ಝೆರಾಕ್ಸ್ ಅಂಗಡಿಗಳನ್ನು ತೆರೆಯದಂತೆ ಸೂಚನೆ ನೀಡಲಾಗಿದೆ. ಎಕ್ಸಾಂ ಹಾಲ್‌ನಲ್ಲಿ ಸಿಟಿಟಿವಿ ಕ್ಯಾಮರಾ ಅಳವಡಿಸಲಾಗಿದೆ.
ವಿದ್ಯಾರ್ಥಿಗಳು ಯಾವುದೇ ಭಯ ಪಡದೆ, ಕಷ್ಟಪಟ್ಟಿದ್ದೆಲ್ಲವೂ ನೆನಪಾಗಿ, ಹಾಯಾಗಿ ಪರೀಕ್ಷೆ ಬರೆದು ಉತ್ತೀರ್ಣರಾಗಲಿ ಎಂದು ಆಶಿಸೋಣ.. ವಿದ್ಯಾರ್ಥಿಗಳೇ All The Best 😊