ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆಯಲ್ಲಿ ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿಯ ವಿಚಾರಣೆಯನ್ನು ನಡೆಸಿದ್ದಾರೆ.
ವಿಚಾರಣೆ ವೇಳೆ ಏಳೂ ಜನರು ತಾವು ಘೋಷಣೆ ಕೂಗಿಲ್ಲ ಎಂದು ಹೇಳಿದ್ದಾರೆ. ಆದರೆ ಪೊಲೀಸರು ಇವರಲ್ಲಿ ಐದು ಮಂದಿಯ ಧ್ವನಿ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದಾರೆ.
ಎಲ್ಲ ಮಾಧ್ಯಮಗಳಿಂದ ತುಣುಕುಗಳನ್ನು ಪಡೆದಿದ್ದು, ಅದನ್ನೂ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ. ಒಟ್ಟಾರೆ ಇನ್ನೂ 26 ಜನ ಘೋಷಣೆ ಕೂಗುವ ವೇಳೆ ಆ ಸ್ಥಳದಲ್ಲಿದ್ದರು. ಅವರಲ್ಲಿ 19 ಜನರ ವಿಚಾರಣೆ ನಡೆಸುವುದು ಬಾಕಿ ಇದೆ.
ನಾಸಿರ್ ಹುಸೇನ್ ಗೆಲುವಿನ ನಂತರ ಜೊತೆಗಿದ್ದ ಕಾರ್ಯಕರ್ತರಲ್ಲಿ ಮೊಹಮ್ಮದ್ ಶಫಿ ನಾಶಿಪುಡಿ ಎಂಬಾತ ಪಾಕ್ ಪರ ಘೋಷಣೆ ಕೂಗಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ.