ಲೋಕಸಭಾ ಚುನಾವಣೆಯಲ್ಲಿ 3 ಸ್ಥಾನ ಮುಸ್ಲಿಮರಿಗೆ ಕೊಡಬೇಕು: ಸಚಿವ ಜಮೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಜನಸಂಖ್ಯೆಗೆ ಅನುಗುಣವಾಗಿ 3 ಸ್ಥಾನ ಮುಸ್ಲಿಮರಿಗೆ ಕೊಡಬೇಕು ಅಂತ ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ ಎಂದು ಸಚಿವ ಜಮೀರ್ ಅಹಮದ್ ಖಾನ್‌ (Zameer Ahmed Khan) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಮುಸ್ಲಿಮರಿಗೆ (Muslims) 3 ಸ್ಥಾನ ಕೇಳಿದ್ದೇವೆ. ಬೆಂಗಳೂರು ಕೇಂದ್ರ, ಬೀದರ್, ಹಾವೇರಿ ಕ್ಷೇತ್ರಗಳಿಗೆ ಟಿಕೆಟ್ ಕೇಳಿದ್ದೇವೆ. ಹೈಕಮಾಂಡ್ ತೀರ್ಮಾನ ಮಾಡಬೇಕು. ನಮಗೆ ಟಿಕೆಟ್ (Election Ticket) ಕೇಳಿದ್ದೇವೆ ಅನ್ನೋದಕ್ಕಿಂತ ಗೆಲ್ಲಬೇಕು ಅನ್ನೋದು ಮುಖ್ಯ ಎಂದರು.

ಈಗ ನಮ್ಮಲ್ಲಿ ಒಬ್ಬರು ಸಂಸದರು ಮಾತ್ರ ಇದ್ದಾರೆ. ಅವರಿಗೆ ಧ್ವನಿ ಎತ್ತಲು ಅವಕಾಶ ಕೊಡ್ತಿಲ್ಲ. ‌ಬಿಜೆಪಿಯ 25, ಸುಮಲಾ ಹಾಗೂ ಪ್ರಜ್ವಲ್‌ ರೇವಣ್ಣ ಅವರೂ ಎನ್‌ಡಿಎ ಭಾಗವಾಗಿರೋದ್ರಿಂದ ಅವರೂ ಬಿಜೆಪಿ ಜೊತೆಗಿದ್ದಾರೆ. ಒಟ್ಟು 27 ಜನ ಸಂಸದರು ಇದ್ದಾರೆ. 27 ಜನ ಸಂಸದರು ಕರ್ನಾಟಕ ವಿಚಾರವಾಗಿ ಧ್ವನಿ ಎತ್ತುತ್ತಿದ್ದಾರಾ? ನಮ್ಮ ಪಕ್ಷದವರು ಸಂಸತ್‌ನಲ್ಲಿದ್ದರೆ ಧ್ವನಿ ಎತ್ತಲು ಅನುಕೂಲವಾಗುತ್ತದೆ. ನಮ್ಮವರು ಜಾಸ್ತಿ ಇದ್ದರೆ ಧ್ವನಿ ಎತ್ತಬಹುದು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ನಮ್ಮ ರಾಜ್ಯದಿಂದ ನಮ್ಮವರು ಜಾಸ್ತಿ ಇದ್ದರೆ ಒಳ್ಳೆಯದು ಎಂದರು.

ಲೋಕಸಭೆಯಲ್ಲಿ ಕನಿಷ್ಟ 20-22 ಸ್ಥಾನ ಗೆಲ್ತೀವಿ. ವಿಧಾನಸಭೆಯಲ್ಲೂ 135 ಸ್ಥಾನ ಬರುತ್ತೆ ಅಂತ ಹೇಳಿದ್ದೆ. ಯಾರೂ ನಂಬಲಿಲ್ಲ, ಆದ್ರೆ 136 ಸ್ಥಾನ ಬಂತು. ಲೋಕಸಭೆಯಲ್ಲೂ ಖಂಡಿತಾ 20-22 ಸ್ಥಾನ ಬರುತ್ತದೆ ಎಂದು ಭವಿಷ್ಯ ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!