ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ ಜನ್ಮದಿನಕ್ಕೆ ಚೀನಾದ ಭಾಷೆಯಲ್ಲಿ ಶುಭ ಕೋರಿದ ಬಿಜೆಪಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರ 71ನೇ ಜನ್ಮದಿನಕ್ಕೆ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ. ತಮಿಳುನಾಡು ಬಿಜೆಪಿ ಚೀನಾದ ಮ್ಯಾಂಡರಿನ್‌ ಭಾಷೆಯಲ್ಲಿ ಶುಭಾಶಯ ಕೋರಿದೆ.

ಇಸ್ರೊದ ಹೊಸ ಘಟಕ ಸ್ಥಾಪನೆಗೆ ಶುಭಕೋರುವ ಜಾಹೀರಾತಿನಲ್ಲಿ ಚೀನಾ ಧ್ವಜ ಇರುವ ರಾಕೇಟ್ ಬಳಸಿದ್ದು ವಿವಾದ ಸೃಷ್ಟಿಯಾದ ಬೆನ್ನಲ್ಲೇ, ಈ ವ್ಯಂಗ್ಯಭರಿತ ಪೋಸ್ಟ್‌ ಹಾಕಿದೆ.

ಈ ಕುರಿತು ತಮಿಳುನಾಡು ಬಿಜೆಪಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ‘ತಮಿಳುನಾಡು ಬಿಜೆಪಿ ಪರವಾಗಿ, ನಿಮ್ಮಿಷ್ಟದ ಭಾಷೆಯಲ್ಲೇ ನಿಮಗೆ ಜನ್ಮದಿನದ ಶುಭಕೋರುತ್ತಿದ್ದೇವೆ, ದೀರ್ಘಕಾಲ ಆರೋಗ್ಯದಿಂದ ಬದುಕಿ’ ಎಂದು ಬರೆದುಕೊಂಡಿದೆ.

ತಮಿಳುನಾಡಿನ ಕುಲಶೇಖರಪಟ್ಟಿಣಂನಲ್ಲಿ ಇಸ್ರೊದ ರಾಕೆಟ್‌ ಉಡ್ಡಯನ ನೆಲೆ ಶಂಕುಸ್ಥಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಮಿಳುನಾಡು ಮೀನುಗಾರಿಕೆ ಸಚಿವ ಅನಿತಾ ರಾಧಾಕೃಷ್ಣನ್ ನೀಡಿರುವ ಜಾಹೀರಾತುಗಳು ತಮಿಳು ದಿನಪತ್ರಿಕೆಗಳಲ್ಲಿ ಪ್ರಕಟವಾದ್ದವು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರ ಭಾವಚಿತ್ರಗಳ ಜೊತೆಗೆ ರಾಕೆಟ್‌ವೊಂದರ ಚಿತ್ರವನ್ನು ಬಳಸಲಾಗಿತ್ತು. ರಾಕೆಟ್‌ನ ತುದಿಯಲ್ಲಿ ಚೀನಾ ಬಾವುಟ ಹಾಗೂ ಚೀನಿ ಅಕ್ಷರಗಳಿವೆ ಎಂಬ ಆರೋಪ ವಿವಾದ ಸೃಷ್ಟಿಸಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!