ಹೊಸದಿಗಂತ ವರದಿ ಧಾರವಾಡ:
ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ 16ನೇ ಸಮ್ಮೇಳನ ಮಾ.6 ಮತ್ತು 7ರಂದು ಜೆಎಸ್ಸೆಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆ ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹಮ್ಮಿಕೊಂಡಿದ್ದಾಗಿ ಹೇಳಿದರು.
ಸೋಮವಾರ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೆ.ಎಸ್.ಶರ್ಮಾ ಸರ್ವಾಧ್ಯಕ್ಷತೆ ಸಮ್ಮೇಳನದಲ್ಲಿ ಎರಡು ದಿನ ಸಂಭ್ರಮದಿಂದ ನುಡಿತೇರು ಸಾಗಲಿದೆ ಎಂದು ತಿಳಿಸಿದರು.
ಮಾ. 6ಕ್ಕೆ ವಿವಿಧ ಧ್ವಜಾರೋಹಣ, ಸಾಹಿತ್ಯ ಚಿಂತನೆ, ಬೇಂದ್ರೆ ಸಾಹಿತ್ಯದ ಒಳನೋಟ, ಯುವಕರ ಹವ್ಯಾಸ-ವ್ಯಕ್ತಿತ್ವದ ಗೋಷ್ಠಿಯಲ್ಲಿ ದಿಗ್ಗಜ ಸಾಹಿತಿಗಳು, ಸಂಪನ್ಮೂಲ ವ್ಯಕ್ತಿಗಳು ಬೆಳಕು ಚೆಲ್ಲುವ ಪ್ರಯತ್ನ ಮಾಡಲಿದ್ದಾರೆ ಎಂದರು.
ಮಾ.7ಕ್ಕೆ ಮಹಿಳಾ ಸಂವೇದನೆ, ಮಾನವ ಹಕ್ಕುಗಳು ಮತ್ತು ಸಂವಿಧಾನ, ಮರೆಯಲಾಗದ ಕವಿಗಳ ನೆನಪು, ಸರ್ವಾಧ್ಯಕ್ಷರ ಜತೆ ಸಂವಾದ, ಬಹಿರಂಗ ಸಮಾವೇಶ, ಸಮಾರೋಪ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮ್ಮೇಳನಕ್ಕೆ ತೆರೆ ಬೀಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪದಾಧಿಕಾರಿಗಳಾದ ಡಾ.ಲಿಂಗರಾಜ ಅಂಗಡಿ, ಪ್ರೊ.ಕೆ.ಎಸ್.ಕೌಜಲಗಿ, ಡಾ.ಎಸ್.ಎಸ್.ದೊಡಮನಿ, ಡಾ. ಜಿನದತ್ತ ಹಡಗಲಿ, ಮಾರ್ತಾಂಡಪ್ಪ ಕತ್ತಿ ಇದ್ದರು