ರಾಮೇಶ್ವರಂ ಘಟನೆ ಮಾಸುವ ಮುನ್ನವೇ ಬಂತು ಸಿಎಂ, ಡಿಸಿಎಂಗೂ ಬಾಂಬ್​ ಬೆದರಿಕೆ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮೇಶ್ವರಂ ಕೆಫೆಯಲ್ಲಿನ ಬಾಂಬ್​ ಸ್ಪೋಟದಿಂದಾಗಿ ರಾಜಧಾನಿಯ ಮಂದಿ ಆತಂಕದಲ್ಲಿದ್ದು, ಈ ಕಹಿ ಘಟನೆ ಮಾಸುವ ಮುನ್ನವೇ ಮತ್ತೊಂದು ಬಾಂಬ್​ ಬೆದರಿಕೆ ಸಂದೇಶ ಬಂದಿದೆ.

ಇಂದು (ಮಾ.05) ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ, ಗೃಹಸಚಿವರು ಮತ್ತು ಬೆಂಗಳೂರು ನಗರ ಪೊಲೀಸ್​ ಆಯುಕ್ತರಿಗೆ ಇ ಮೇಲ್​ ಮೂಲಕ ಬೆದರಿಕೆ ಸಂದೇಶವೊಂದು ಬಂದಿದೆ. 2.5 ಮಿಲಿಯನ್​ ಡಾಲರ್​ ಕೊಡಲಿಲ್ಲ ಅಂದರೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಪೋಟಿಸಿದ ರೀತಿಯಲ್ಲೇ ನಗರದ ಬಸ್​ಗಳು, ಬಸ್​ ಹಾಗೂ ರೈಲು ನಿಲ್ದಾಣಗಳನ್ನು ಸ್ಪೋಟಿಸುವುದಾಗಿ ಇ ಮೇಲ್ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ.

10786progongmail.com ಎನ್ನುವ ಇ ಮೇಲ್ ಐಡಿಯಿಂದ ಬೆದರಿಕೆ ಮೆಸೇಜ್​ ಬಂದಿದೆ. ರಾಮೇಶ್ವರಂ ಕೆಫೆ ಪ್ರಕರಣ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ನಗರದ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈಗಾಗಲೇ ಸಿಸಿಬಿ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ. ಇಮೇಲ್ ಸಂದೇಶದ ಮೂಲವನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!