ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗುವೇ ವ್ಯಕ್ತಿತ್ವದ ಅಂದ. ಆದರೆ ಕನ್ನಡಿಯ ಮುಂದೆ ನಿಂತಾಗ ಹಲ್ಲಿನ ಹಳದಿ ಬಣ್ಣ ಕಣ್ಣಿಗೆ ಬಿದ್ದರೆ, ನಗು ಸಹ ಸ್ವಲ್ಪ ಹಿಂಜರಿಯುತ್ತದೆ. ಕಾಫಿ, ಟೀ, ತಂಬಾಕು, ಸರಿಯಾದ ಸ್ವಚ್ಛತೆ ಕೊರತೆ ಇವೆಲ್ಲವೂ ಹಲ್ಲು ಹಳದಿಯಾಗಲು ಕಾರಣವಾಗುತ್ತವೆ. ಹೀಗಿರುವಾಗ ಡೆಂಟಲ್ ಟ್ರೀಟ್‌ಮೆಂಟ್‌ಗೆ ಓಡದೇ, ಮೊದಲು ಮನೆಯಲ್ಲೇ ಪ್ರಯತ್ನಿಸಬಹುದಾದ ಕೆಲವು ಸರಳ ಹಾಗೂ ಸುರಕ್ಷಿತ ವಿಧಾನಗಳಿವೆ.
- ಉಪ್ಪು ಮತ್ತು ನಿಂಬೆ ಮಿಶ್ರಣ: ಸ್ವಲ್ಪ ಉಪ್ಪಿಗೆ ಎರಡು ಹನಿಯಷ್ಟು ನಿಂಬೆ ರಸ ಹಾಕಿ ವಾರಕ್ಕೆ ಒಂದು ಬಾರಿ ಹಲ್ಲುಗಳ ಮೇಲೆ ಸೌಮ್ಯವಾಗಿ ಹಚ್ಚಿ ತೊಳೆಯಿರಿ. ಇದು ಮೇಲ್ಮೈ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಬೇಕಿಂಗ್ ಸೋಡಾ ಬಳಕೆ: ಬೇಕಿಂಗ್ ಸೋಡಾವನ್ನು ಟೂತ್‌ಪೇಸ್ಟ್ ಜೊತೆ ಮಿಶ್ರಣ ಮಾಡಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಬಳಸಿ. ಅತಿಯಾಗಿ ಬಳಸಿದರೆ ಹಲ್ಲಿನ ಎನಾಮೆಲ್‌ಗೆ ಹಾನಿಯಾಗಬಹುದು.
- ತೆಂಗಿನ ಎಣ್ಣೆ ಬಳಸಿ: ಪ್ರತಿ ದಿನ ಬೆಳಿಗ್ಗೆ ಒಂದು ಚಮಚ ತೆಂಗಿನ ಎಣ್ಣೆಯನ್ನು 10 ನಿಮಿಷ ಬಾಯಿ ಮುಕ್ಕಳಿಸಿ. ಇದು ಹಲ್ಲಿನ ಬಣ್ಣ ಸುಧಾರಿಸುವ ಜೊತೆಗೆ ಬಾಯಿಯ ದುರ್ವಾಸನೆಯನ್ನು ಕೂಡ ಕಡಿಮೆ ಮಾಡುತ್ತದೆ.
- ಸೇಬು, ಕ್ಯಾರೆಟ್ ಸೇವನೆ: ಕಚ್ಚಿ ತಿನ್ನುವ ಹಣ್ಣು-ತರಕಾರಿಗಳು ಹಲ್ಲುಗಳನ್ನು ಸ್ವಾಭಾವಿಕವಾಗಿ ಸ್ವಚ್ಛಗೊಳಿಸುತ್ತವೆ. ಇದು ನೈಸರ್ಗಿಕ ಕ್ಲೀನಿಂಗ್ ವಿಧಾನ.
- ಈ ಅಭ್ಯಾಸ ತಪ್ಪಿಸಿ: ಹೆಚ್ಚು ಟೀ-ಕಾಫಿ, ಧೂಮಪಾನ, ಮಿಠಾಯಿ ಸೇವನೆ ಕಡಿಮೆ ಮಾಡಿದರೆ ಹಳದಿ ಬಣ್ಣ ಮರುಕಳಿಸುವುದನ್ನು ತಡೆಯಬಹುದು(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

