ಸಂದೇಶಖಾಲಿ ಸಂತ್ರಸ್ತ ಮಹಿಳೆಯರನ್ನು ಭೇಟಿಯಾದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂದೇಶಖಾಲಿ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಭೇಟಿಯಾಗಿ ಸಾಂತ್ವನ ಹೇಳಿದರು.

ಪ್ರಧಾನಿ ತಮ್ಮ ನೋವನ್ನು ಅರ್ಥಮಾಡಿಕೊಂಡಿದ್ದಾರೆ ಎಂಬ ಅಂಶದಿಂದ ಸಂತ್ರಸ್ತರು ತುಂಬಾ ಭಾವುಕರಾಗಿದ್ದರು ಎಂದು ಭಾರತೀಯ ಜನತಾ ಪಕ್ಷದ ಮೂಲಗಳು ತಿಳಿಸಿವೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮೋದಿ ಮುಂದೆ ತಾವು ಅನುಭವಿಸಿದ ನರಕಯಾತನೆ ಬಗ್ಗೆ ಹೇಳಿದೆ. ಮೋದಿ ಕೂಡ ತಂದೆಯಂತೆ ಶಾಂತಚಿತ್ತದಿಂದ ಎಲ್ಲವನ್ನು ಕೇಳಿಸಿಕೊಂಡಿದ್ದಾರೆ. ಜತೆಗೆ ಅವರಿಗೆ ಸಮಾಧನದ ಮಾತಗಳು ಕೂಡ ಹೇಳಿದ್ದಾರೆ.

ಉತ್ತರ 24 ಪರಗಣದ ಸಂದೇಶ್ಖಾಲಿ ಗ್ರಾಮದಲ್ಲಿ ತೃಣಮೂಲ ಕಾಂಗ್ರೆಸ್ನ ಸ್ಥಳೀಯ ಮುಖಂಡ ಶೇಖ್ ಶಹಜಹಾನ್ ಮತ್ತು ಅವರ ಸಹಚರರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹಲವಾರು ಮಹಿಳೆಯರು ಆರೋಪಿಸಿದ್ದಾರೆ. ಅವರ ಬೆಂಬಲಿಗರಿಂದ ‘ಭಾಯ್’ ಎಂದೂ ಕರೆಯಲ್ಪಡುವ 40 ವರ್ಷದ ಟಿಎಂಸಿ ನಾಯಕನನ್ನು ಕಳೆದ ವಾರ ಬಂಧಿಸಲಾಗಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!