ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಹಜಹಾನ್ ಶೇಖ್’ನ ನ್ನು ಇಂದು ಸಿಬಿಐಗೆ ಹಸ್ತಾಂತರಿಸುವಂತೆ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಹರೀಶ್ ಟಂಡನ್ ಮತ್ತು ಹಿರಣ್ಮಯ್ ಭಟ್ಟಾಚಾರ್ಯ ಅವರ ನ್ಯಾಯಪೀಠವು ತನ್ನ ಆದೇಶದಲ್ಲಿ, ‘ಮಾರ್ಚ್ 5 ರಂದು ಹೊರಡಿಸಿದ ನಮ್ಮ ಆದೇಶದ ಬಗ್ಗೆ ನಾವು ಗಂಭೀರವಾಗಿರುತ್ತೇವೆ.ಸುಪ್ರೀಂ ಕೋರ್ಟ್’ನಲ್ಲಿ ಎಸ್ ಎಲ್ ಪಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ನಮ್ಮ ಆದೇಶಕ್ಕೆ ಯಾವುದೇ ತಡೆಯಾಜ್ಞೆ ಬಂದಿಲ್ಲ, ಆದ್ದರಿಂದ ಬುಧವಾರ ಸಂಜೆ 4.15 ರೊಳಗೆ ಶಹಜಹಾನ್ ಸಿಬಿಐಗೆ ಹಸ್ತಾಂತರಿಸಬೇಕು’ ಎಂದಿದೆ.