ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಿನೆಲ್ಲೆಡೆ ಇಂದು ಮಹಾಶಿವರಾತ್ರಿ ಸಂಭ್ರಮ ಮನೆಮಾಡಿದೆ. ಬೆಂಗಳೂರಿನ ದೇಗುಲಗಳಲ್ಲಿ ಹಬ್ಬದ ಸಂಭ್ರಮ ದುಪ್ಪಟ್ಟಾಗಿದ್ದು, ದೇಗುಲಗಳಿಗೆ ಭಕ್ತರು ಭೇಟಿ ನೀಡುತ್ತಿದ್ದಾರೆ.
ಆದರೆ ರಾಮೇಶ್ವರಂ ಕೆಫೆ ಬ್ಲಾಸ್ಟ್‌ನ ಕಾರಣದಿಂದಾಗಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಹೆಚ್ಚಿನ ಜನ ಸೇರುವ ಸಾಧ್ಯತೆ ಇರುವ ಜಾಗಗಳಲ್ಲಿ ಹೆಚ್ಚು ನಿಗಾ ವಹಿಸಿದ್ದಾರೆ. ಜೊತೆಗೆ ಕೆಲ ಮಾರ್ಗಗಳಲ್ಲಿ ಓಡಾಟ ನಿಲ್ಲಿಸಲಾಗಿದೆ.
ಜೀವನಹಳ್ಳಿ, ಚಾರ್ಲ್ಸ್ ಕ್ಯಾಂಬೇಜ್ ಮುಖ್ಯರಸ್ತೆ, ಬೈಯ್ಯಪ್ಪನಹಳ್ಳಿ ರಸ್ತೆ, ಕಲ್ಲಲ್ಲಿ ಸ್ಮಶಾನದ ರಸ್ತೆ, ಗರುಡಾಚಾರಪಾಳ್ಯ ಜಂಕ್ಷನ್‌ನಿಂದ ರಾಯಣ್ಣ ಸರ್ಕಲ್, ಗೋಶಾಲ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ವರೆಗೆ ಸಂಚಾರ ನಿರ್ಬಂಧ ಇರಲಿದೆ.
ದೊಡ್ಡಗುಂಟೆ ಸರ್ಕಲ್, ಕೆನ್ಸಿಂಗ್ಟನ್ ರಸ್ತೆ ಮೂಲಕ ಬೈಯ್ಯಪ್ಪನಹಳ್ಳಿ ಓವರ್ ಬ್ರಿಡ್ಜ್ ಎಡರಸ್ತೆ, ಹೂಡಿ ಕೃಷ್ಣ ಟೆಂಪಲ್. ಬಿಎಂಶ್ರೀ ಜಂಕ್ಷನ್‌ನಿಂದ ಆದರ್ಶ ಜಂಕ್ಷನ್ ಮೂಲಕ ತೆರಳಬಹುದು. ಬಜಾರ್ ಸ್ಟ್ರೀಟ್ ಸವಾರರಿಗೆ ಗುರುದ್ವಾರ ಜಂಕ್ಷನ್. ರಾಮಯ್ಯ ಜಂಕ್ಷನ್ ಸವಾರರಿಗೆ ಟ್ರಿನಿಟಿ ಜಂಕ್ಷನ್. ಓ.ಎಂ.ರಸ್ತೆ ಸವಾರರಿಗೆ ಕೆ ಆರ್ ಪುರಂ ಎಕ್ಸ್ಟೆನ್ಷನ್ ರಸ್ತೆ ಬಳಸುವಂತೆ ಮನವಿ ಮಾಡಲಾಗಿದೆ.