ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್‌ಗೆ ಸಂಬಂಧಿಸಿದಂತೆ ಕಲಾವಿದನೊಬ್ಬ ಸಿಸಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿದ್ದ ಫೋಟೊ ಆದಾರದಲ್ಲಿ ಸ್ಕೆಚ್ ತಯಾರಿಸಿದ್ದರು.
ಈ ಸ್ಕೆಚ್ ಅನಧಿಕೃತ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಸ್ಕ್ ಇಲ್ಲದ ಫೋಟೊವನ್ನು ಎನ್‌ಐಎ ರಿಲೀಸ್ ಮಾಡಿ, ಈ ಬಗ್ಗೆ ಸುಳಿವು ನೀಡಿದವರಿಗೆ ಹತ್ತು ಲಕ್ಷ ರೂಪಾಯಿ ಬಹುಮಾನ ಎಂದು ಹೇಳಿತ್ತು. ಮಾಹಿತಿ ನೀಡಿದವರ ಐಡೆಂಟಿಟಿ ಗೌಪ್ಯವಾಗಿ ಇಡುತ್ತೇವೆ ಎಂದು ಹೇಳಿದ್ದರು.
ಫೋಟೊ ಆಧಾರವಾಗಿಟ್ಟುಕೊಂಡು ಬಾಂಬರ್‌ನ ರೇಖಾಚಿತ್ರವನ್ನು ಬಿಡಿಸಲಾಗಿತ್ತು. ಇದು ಪೊಲೀಸರಿಗೆ ಸಹಾಯವಾಗಲಿ ಎಂದು ಕಲಾವಿದ ಹೇಳಿದ್ದರು. ಇದಕ್ಕೆ ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಇಂತಹ ರೇಖಾಚಿತ್ರಗಳನ್ನು ಹರಿಬಿಟ್ಟರೆ ಅದೇ ಫಾರ್ವರ್ಡ್ ಆಗಿ ಆಗಿ ನಿಜ ಎಂದಾಗುತ್ತದೆ. ಇದು ಅಧಿಕೃತ ಫೋಟೊ ಅಲ್ಲ, ಜನರಿಗೆ ಸುಳಿವು ನೀಡಲು ಗೊಂದಲ ಆಗುತ್ತದೆ. ಈ ಫೋಟೊ ವೈರಲ್ ಆಗುತ್ತಿದ್ದಂತೆಯೇ ಆರೋಪಿ ಎಚ್ಚೆತ್ತು ತನ್ನ ಮುಖದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾನೆ. ಆಗ ಆತ ನಿಜವಾಗಿಯೂ ಹೇಗೆ ಕಾಣುತ್ತಾನೆ ಎನ್ನುವುದನ್ನು ಮರೆತುಹೋಗುತ್ತೇವೆ. ಶೀಘ್ರವೇ ಫೋಟೊಗಳನ್ನು ಹಂಚಿಕೊಳ್ಳುತ್ತೇವೆ ಎಂದಿದ್ದಾರೆ.