ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಆ್ಯಪ್ ಆಧಾರಿತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆಯನ್ನು (Electric bike Taxi service) ರದ್ದು ಪಡಿಸಿ ಸಾರಿಗೆ ಇಲಾಖೆ (Transport Department) ಆದೇಶ ಹೊರಡಿಸಿದೆ.
ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ -2021ನ್ನು ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಇದರಿಂದಾಗಿ ಇನ್ನು ಮುಂದೆ ಯಾರೂ ಎಲೆಕ್ಟ್ರಿಕ್ ಬೈಕ್‌ಗಳನ್ನು ಹಣ ಪಡೆದು ಸೇವೆ ನೀಡಲು ಬಳಸುವಂತಿಲ್ಲ. ಇದರಿಂದ ಆಯಪ್ ಆಧಾರಿತ (App based Services) ರ‍್ಯಾಪಿಡೊ, ಓಲಾ (Rapido Ola service) ಮೊದಲಾದ ಸಂಸ್ಥೆಗಳು ನಡೆಸುತ್ತಿದ್ದ ಸೇವೆಗೆ ಕಡಿವಾಣ ಬಿದ್ದಂತಾಗಿದೆ.
ಹಿಂದಿನ ಬಿಜೆಪಿ ಸರ್ಕಾರವು 2021ರ ಜುಲೈ 14ರಂದು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ, ಸಾರ್ವಜನಿಕರಿಂದ ಕೇಳಿಬಂದ ಹಲವು ದೂರುಗಳು ಮತ್ತು ಸಮೀಕ್ಷೆಯ ಬಳಿಕ ಅನುಮತಿಯನ್ನು ವಾಪಸ್ಸು ಪಡೆದುಕೊಂಡಿದೆ.
ಆಟೋ, ಟ್ಯಾಕ್ಸಿ, ಮ್ಯಾಕ್ಸಿ, ಕ್ಯಾಬ್ ಚಾಲಕರಂತೂ ಬೈಕ್ ಟ್ಯಾಕ್ಸಿ ವಿರುದ್ಧ ಬಾರಿ ಹೋರಾಟವನ್ನೇ ಮಾಡಿದ್ದರು. ಮಹಿಳೆಯರಿಗೆ ಬೈಕ್ ಟ್ಯಾಕ್ಟಿ ಅಸುರಕ್ಷಿತವಾದ ಯೋಜನೆ ಎಂಬ ಕೂಗು ಕೇಳುತ್ತಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021 ರದ್ದುಗೊಳಿಸಿ ಆದೇಶ ಹೊರಡಿಸಿದೆ.
Good information