ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮೇಶ್ವರಂ ಕೆಫೆಯಲ್ಲಿ(Rameshwaram Cafe) ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ತೆಗೆ ನೆರವಾಗಲೆಂದು ಬಾಂಬರ್ನ ಓಡಾಟದ ಮತ್ತೆರಡು ವಿಡಿಯೋವನ್ನ ಎನ್ಐಎ(NIA) ರಿಲೀಸ್ ಮಾಡಿದ್ದು, ಆರೋಪಿ ಬಿಎಂಟಿಸಿ ಬಸ್ನಲ್ಲಿ ಹತ್ತಿರುವ ಮತ್ತು ಬಸ್ ನಿಲ್ದಾಣವೊಂದರಲ್ಲಿ ಓಡಾಡಿರುವ ವಿಡಿಯೋವನ್ನ ಬಿಡುಗಡೆ ಮಾಡಿದೆ.
ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಎನ್ಐಎ ತನಿಖೆ ತೀವ್ರ ಗೊಳಿಸಿದೆ.ಈ ಬೆನ್ನಲ್ಲೇ ತನಿಖೆಗೆ ಸಹಾಯವಾಗುವ ನಿಟ್ಟಿನಲ್ಲಿ, ಬಾಂಬರ್ ಸುಳಿವು ಸಿಗಲೆಂದು, ಬಾಂಬರ್ ಗೆ ಸಂಬಂಧ ಪಟ್ಟಂತೆ ಇಂದು ಮತ್ತೆರಡು ವಿಡಿಯೋ ವನ್ನು ರಿಲೀಸ್ ಮಾಡಿದೆ.
#WATCH | NIA releases a video of the suspect linked to the Bengaluru's Rameshwaram Cafe blast case, seeks citizens' help in ascertaining his identity
(Video source: NIA) pic.twitter.com/QVVJfy23ZN
— ANI (@ANI) March 8, 2024
ಎನ್ಐಎಯಿಂದ ಇಂದು ಬಿಡುಗಡೆ ಮಾಡಿರುವಂತ ವೀಡಿಯೋದಲ್ಲಿ ಆರೋಪಿ ಪತ್ತೆಗೆ ನೆರವಾಗಲೆಂದು ಬಾಂಬರ್ ಬಿಎಂಟಿಸಿ ಬಸ್ ನಲ್ಲಿ ಹತ್ತಿರುವ ವೀಡಿಯೋ ಬಿಡುಗಡೆ ಮಾಡಲಾಗಿದೆ. ರಾಮೇಶ್ವರಂ ಕೆಫೆಯ ಸ್ಪೋಟದ ಆರೋಪಿ ಬಸ್ ನಿಲ್ದಾಣವೊಂದರಲ್ಲಿ ಓಡಾಡುತ್ತಿರುವ ವಿಡಿಯೋ ವನ್ನು ಕೂಡ ರಿಲೀಸ್ ಮಾಡಲಾಗಿದೆ. ಈ ಎರಡು ವಿಡಿಯೋ ಗಳನ್ನು ಆರೋಪಿ ಪತ್ತೆಗೆ ನೆರವಾಗಲೆಂದು ಎನ್ಐಎ ಬಿಡುಗಡೆ ಮಾಡಿರೋದಾಗಿ ತಿಳಿದು ಬಂದಿದೆ.