ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಚುನಾವಣಾ ಸಮಿತಿಯ ಪವನ್ ಖೇರಾ, ಕೆಸಿ ವೇಣುಗೋಪಾಲ್, ಅಜಯ್ ಮಾಕೇನ್ ಮೊದಲ ಪಟ್ಟಿ ಬಿಡುಗಡೆ ಮಾಡಿದರು. ದೇಶದ 39 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಈ ಪೈಕಿ ಕರ್ನಾಟಕದ 7 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿದೆ.
ರಾಹುಲ್ ಗಾಂಧಿ ಕೇರಳದ ವಯಾನಾಡಿನಿಂದ ಈ ಬಾರಿಯೂ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ತಿರುವನಂತಪುರಂ ಕ್ಷೇತ್ರದಿಂದ ಶಶಿ ತರೂರ್ಗೆ ಟಿಕೆಟ್ ನೀಡಲಾಗಿದೆ.
ಕರ್ನಾಟಕದ 7 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿದೆ. ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್ಗೆ ಟಿಕೆಟ ಫೈನಲ್ ನೀಡಲಾಗಿದೆ. ಮಂಡ್ಯದಿಂದ ವೆಂಕಟರಮಣೇಗೌಡಗೆ ಟಿಕೆಟ್ ನೀಡಲಾಗಿದೆ.
ಕರ್ನಾಟಕ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ಬಿಜಾಪುರ-ಎಸ್ಆರ್ ಅಲಗೋರ್
ಹಾವೇರಿ: ಅನಂದ್ಸ್ವಾಮಿ ಗಡ್ಡೇವರ ಮಠ
ತುಮಕೂರು: ಎಸ್ಪಿ ಮುದ್ದಹನುಮೇಗೌಡ
ಮಂಡ್ಯ: ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
ಬೆಂಗಳೂರು ಗ್ರಾಮೀಣ: ಡಿಕೆ ಸುರೇರಶ್
ಶಿವಮೊಗ್ಗ-ಗೀತಾ ಶಿವರಾಜ್ಕುಮಾರ್
ಹಾಸನ: ಶ್ರೇಯಸ್ ಪಟೇಲ್