ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವರಾತ್ರಿಯಂದೇ ಶ್ರೀ ಕ್ಷೇತ್ರ ಧರ್ಮಸ್ಥಳದ ಆನೆ ‘ಲತಾ’ ಮೃತಪಟ್ಟಿದೆ.
60ವರ್ಷ ಪ್ರಾಯದ ಲತಾ ಕಳೆದ 50 ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸೇವೆಯಲ್ಲಿ ನಿರತವಾಗಿತ್ತು.ಶುಕ್ರವಾರ ಮಧ್ಯಾಹ್ನದ ವೇಳೆ ಹೃದಯಾಘಾತದಿಂದ ಮೃತಪಟ್ಟಿದೆ.
ಕಳೆದ 50 ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಸೇವೆಯಲ್ಲಿ ನಿರತವಾಗಿತ್ತು.
ಧರ್ಮಸ್ಥಳದಲ್ಲಿ ಪ್ರಸ್ತುತ ಲತಾ, ಲಕ್ಷ್ಮೀ ಹಾಗೂ ಶಿವಾನಿ ಎಂಬ ಹೆಸರಿನ ಆನೆಗಳಿದ್ದು, ಲತಾ ಸಾವಿನಿಂದ ಲಕ್ಷ್ಮೀ ಹಾಗೂ ಶಿವಾನಿ ಆನೆಗಳು ಮಂಕಾಗಿವೆ.