ಹೊಸದಿಗಂತ ಡಿಜಿಟಲ್ ಡೆಸ್ಕ್:
5,8,9 ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ತೀರ್ಪಿನಿಂದಾಗಿ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ.
ರಾಜ್ಯದಲ್ಲಿ ಒಟ್ಟಾರೆ 45,000 ಶಾಲೆಗಳಿಂದ 28 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರದ ಅಧಿಸೂಚನೆ ಜೊತೆಗೆ ನ್ಯಾಯಾಲಯದ ಆದೇಶಗಳು ಬದಲಾಗುತ್ತಲೇ ಇರುವ ಕಾರಣದಿಂದ ವಿದ್ಯಾರ್ಥಿಗಳು ಓದಿನ ಬಗ್ಗೆ ನಿಗಾ ವಹಿಸಲು ಆಗುತ್ತಿಲ್ಲ.
ಮಕ್ಕಳನ್ನು ಸಂಭಾಳಿಸುವುದು, ಅವರಿಗೆ ಆತ್ಮಸ್ಥೈರ್ಯ ತುಂಬುವುದು, ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವುದನ್ನು ಹೇಳಿಕೊಡಲು ಪೋಷಕರೂ ಕಷ್ಟಪಡುತ್ತಿದ್ದಾರೆ.
ಹೈಕೋರ್ಟ್ನ ಏಕಸದಸ್ಯ ಪೀಠ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿತ್ತು. ಆದರೆ ಇದನ್ನು ಸರ್ಕಾರ ಪ್ರಶ್ನಿಸಿ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಿತ್ತು. ಆಗ ಹೈಕೋರ್ಟ್ ಪೀಠ ತೀರ್ಪನ್ನು ರದ್ದುಪಡಿಸಿ ಪರೀಕ್ಷೆಗಳು ಮುಂದುವರಿಸಲು ಹೇಳಿತ್ತು.
ತೀರ್ಪಿನ ಗೊಂದಲದಿಂದಾಗಿ ಮಕ್ಕಳ ಕಾರ್ಯಕ್ಷಮತೆಗೆ ಅಡ್ಡಿಯಾಗುತ್ತದೆ. ಸಾವಿರ ರೀತಿ ನಕಲಿ ಮಾಹಿತಿ ರವಾನೆಯಾಗುತ್ತದೆ ಎಂದು ಪೋಷಕರು ದೂರಿದ್ದಾರೆ. ಒಟ್ಟಾರೆ ಮಕ್ಕಳ ಪರೀಕ್ಷೆ ಜೊತೆಗೆ ಪೋಷಕರೂ ಕೂಡ ಪರೀಕ್ಷೆ ಎದುರಿಸುವಂತಾಗಿದೆ.
We need exam