ವ್ಹಾ, ಮಹಿಳಾ ಸಾರಥ್ಯದಲ್ಲಿಯೇ ಓಡಿತು ನೋಡಿ ರಾಂಚಿ- ಟೋರಿ ಜಂಕ್ಷನ್ ನಡುವೆ ಈ ರೈಲು!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಂಚಿ- ಟೋರಿ ಜಂಕ್ಷನ್ ನಡುವಿನ ರೈಲು ಓಡಾಟದ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡು ನಿರ್ವಹಿಸುವ ಮೂಲಕ 16 ಮಂದಿ ಮಹಿಳಾ ಸಿಬ್ಬಂದಿಗಳು ಶುಕ್ರವಾರದ ವಿಶ್ವ ಮಹಿಳಾ ದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ.

ಆಗ್ನೇಯ ರೈಲ್ವೆಯ ರಾಂಚಿ ವಿಭಾಗವು ಇದಕ್ಕೆ ಸಾಥ್ ನೀಡಿದ್ದು, ದೇಶದ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆಯನ್ನು ಸ್ಮರಿಸಲು ನಾವು ಈ ವಿನೂತನ ಪ್ರಯೋಗ ನಡೆಸಿದ್ದೇವೆ ಮತ್ತು ಇದರಲ್ಲಿ ಯಶಸ್ವಿಯಾಗಿದ್ದೇವೆ ಎಂದಿದೆ.

ಯಾರ್‍ಯಾರಿದ್ದರು? ಏನೇನು ಮಾಡಿದ್ರು?
ಈ ಮಹಿಳಾ ಸಿಬ್ಬಂದಿಗಳ ತಂಡದಲ್ಲಿ ಲೊಕೊ ಪೈಲಟ್, ಸಹಾಯಕ ಲೊಕೊ ಪೈಲಟ್, ರೈಲು ಮ್ಯಾನೇಜರ್, ಎಂಟು ಟಿಕೆಟ್ ಕಲೆಕ್ಟರ್‌ಗಳು ಹಾಗೂ ರೈಲ್ವೆ ರಕ್ಷಣಾ ಪಡೆಯ ಐವರು ಸಿಬ್ಬಂದಿಗಳು ಇದ್ದರು. ಇದಲ್ಲದೆ ರಾಂಚಿ ಮತ್ತು ಟೋರಿ ಜಂಕ್ಷನ್‌ಗಳ ನಡುವಿನ ಎಲ್ಲಾ ರೈಲು ನಿಲ್ದಾಣಗಳಲ್ಲಿ ಬುಕಿಂಗ್ ಕೌಂಟರ್‌ಗಳನ್ನು ಕೂಡಾ ಮಹಿಳೆಯರೇ ನಿರ್ವಹಿಸಿದ್ದರು. ರೈಲು ರಾಂಚಿ ನಿಲ್ದಾಣದಿಂದ ಬೆಳಿಗ್ಗೆ 8:55ಕ್ಕೆ ಹೊರಟಿದ್ದು, 14 ನಿಲ್ದಾಣಗಳನ್ನು ದಾಟಿ ಪೂರ್ವಾಹ್ನ 111:30ಕ್ಕೆ ಟೋರಿಯನ್ನು ತಲುಪಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!