ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಫ್ಟ್‌ವೇರ್ ಅಪ್ಡೇಟ್ ಮಾಡುವ ಕಾರಣ ಹೆಸ್ಕಾ ಹತ್ತು ದಿನಗಳ ಕಾಲ ಎಲ್ಲ ಆನ್‌ಲೈನ್ ಸೇವೆಗಳನ್ನು ಬಂದ್ ಮಾಡಲಿದೆ.
ಈ ಬಗ್ಗೆ ಇಂಧನ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಬೆಸ್ಕಾಂ,ಜೆಸ್ಕಾಂ,ಸೆಸ್ಕ್, ಮೆಸ್ಕಾಂ ಹಾಗೂ ಹೆಸ್ಕಾಂನಲ್ಲಿ ಆನ್‌ಲೈನ್ ಸೇವೆಗಳು ಸಿಗುವುದಿಲ್ಲ ಎಂದು ಹೇಳಿದೆ.
ಹೊಸ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಕೆ, ಬಿಲ್ ಪಾವತಿ ಸೇರಿದಂತೆ ಮತ್ತಿತರ ಆನ್‌ಲೈನ್ ಸೇವೆಗಳು ಲಭ್ಯವಿರೋದಿಲ್ಲ ಎಂದು ಹೇಳಿದೆ. ಆದರೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದೆ.