ವರ್ಷ ದಾಟಿದ ಮಕ್ಕಳಿಗೆ ನಿಧಾನಕ್ಕೆ ಎದೆ ಹಾಲು ಕೊಡುವುದನ್ನು ಕಡಿಮೆ ಮಾಡಲಾಗುತ್ತದೆ. ಇನ್ನು ಬೇರೆ ಬೇರೆ ರೀತಿಯ ಆಹಾರ ನೀಡಲಾಗುತ್ತದೆ. ಆದರೆ ಪ್ರತೀ ತಾಯಿಗೂ ಮಕ್ಕಳಿಗೆ ಏನು ಕೊಡಬೇಕು ಅನ್ನೋದೇ ದೊಡ್ಡ ಚಿಂತೆಯಾಗಿರುತ್ತದೆ. ಇಂಥ ತಾಯಂದಿರಿಗಾಗಿ ಈ ರೆಸಿಪಿಗಳು..
ರಾಗಿ ಸರಿ
ಮಕ್ಕಳು ಶಾಲೆಗೆ ಹೋಗುವವರೆಗೂ ರಾಗಿ ಸರಿ ತಿನ್ನೋಕೆ ಇಷ್ಟಪಟ್ಟರೂ ತಿನ್ನಿಸಿ, ಇದರಲ್ಲಿರುವಷ್ಟು ಪೋಷಕಾಂಶ ಇನ್ನೆಲ್ಲೂ ಇಲ್ಲ.
ಮಾಡೋದು ಹೇಗೆ?
ರಾಗಿಯನ್ನು ತೊಳೆದು ಬಿಸಿಲಿನಲ್ಲಿ ಐದಾರು ತಿನ ಚೆನ್ನಾಗಿ ಒಣಗಿಸಿ. ನಂತರ ಇದನ್ನು ಹುರಿಯಿರಿ, ಇದರ ಜೊತೆಗೆ ಅಕ್ಕಿ, ಗೋಧಿ, ಜೋಳ, ಕಡ್ಲೆಬೇಳೆ, ಕಡ್ಲೆಕಾಳು, ಫ್ಲಾಕ್ಸ್ ಸೀಡ್ಸ್, ಹೆಸರುಕಾಳು, ಹೆಸರುಬೇಳೆ, ಇನ್ನಿತರ ಧಾನ್ಯಗಳನ್ನು ಹುರಿದು ಪುಡಿಮಾಡಿಸಿ ಇಟ್ಟುಕೊಳ್ಳಿ. ನೀರಿಗೆ ರಾಗಿ ಸರಿ ಪುಡಿ ಹಾಕಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿಡಿ, ಕೈ ಆಡಿಸುತ್ತಲೇ ಇರಿ, ತುಪ್ಪ ಹಾಕಿ ಮಗುವಿಗೆ ತಿನ್ನಿಸಿ.
ಬೇಳೆ ಕಿಚಡಿ
ಮಕ್ಕಳಿಗೆ ಮತ್ತೊಂದು ಆರೋಗ್ಯಕರ ಆಯ್ಕೆ. ನಿಮ್ಮಿಷ್ಟದ ತರಕಾರಿಯನ್ನು ಮಕ್ಕಳಿಗೆ ಈಸಿಯಾಗಿ ತಿನ್ನಿಸಿ, ಕುಕ್ಕರ್‌ಗೆ ತುಪ್ಪ ಸಾಸಿವೆ ಜೀರಿಗೆ, ಒಮ್ಮೊಮ್ಮೆ ಚಕ್ಕೆ ಲವಂಗ, ಶುಂಠಿ ಬೆಳ್ಳುಳ್ಳಿ, ಈರುಳ್ಳಿ ಟೊಮ್ಯಾಟೊ, ತರಕಾರಿ ಅಥವಾ ಮೊಳಕೆ ಕಾಳುಗಳು, ಮಶ್ರೂಮ್ ಏನಾದರೂ ಹಾಕಿ ನಂತರ ತೊಳೆದಿಟ್ಟ ಅಕ್ಕಿ ಬೇಳೆ ಹಾಕಿ, ಉಪ್ಪು, ಖಾರದಪುಡಿ, ಮೆಣಸು ಅರಿಶಿಣ ಹಾಗೂ ನೀರು ಹಾಕಿ ಕಿಚಡಿ ತಯಾರಿಸಿ ಮಕ್ಕಳಿಗೆ ತಿನ್ನಿಸಿ.
ಇನ್ನೊಂದು ಈಸಿ ಆಯ್ಕೆ ಎಂದರೆ ಹಣ್ಣುಗಳನ್ನು ಮಿಕ್ಸಿಗೆ ಹಾಕಿ ಹಾಲು ಹಾಗೂ ಡ್ರೈಫ್ರೂಟ್ಸ್ ಪುಡಿ ಹಾಕಿ ಸ್ಮಾಶ್ ಮಾಡಿ ತಿನ್ನಿಸಿ.