ಮಕ್ಕಳ ಜೊತೆ ಟ್ರಾವೆಲ್ ಮಾಡೋದು ಸುಲಭದ ಮಾತಲ್ಲ, ಅವರ ಆಟ ಪಾಠ, ಮುಂದಿನ ಸೀಟ್ನಿಂದ ಹಿಂದಿನ ಸೀಟ್ಗೆ ಹಿಂದಿನ ಸೀಟ್ನಿಂದ ಮತ್ತೆ ಮುಂದಿನ ಸೀಟ್ಗೆ ಕೂರೋದು, ಕಾರ್ನ ಬಾಗಿಲು ತೆಗೆಯೋಕೆ ಟ್ರೈ ಮಾಡೋದು ಹೀಗೆ ಅವರ ಆಕ್ಟಿವಿಟಿ ತಡೆಯೋದಕ್ಕೆ ತುಂಬಾನೇ ಕಷ್ಟ. ಅವರ ಜೊತೆ ಟ್ರಾವೆಲ್ ಮಾಡೋಕೆ ಕೆಲ ಟಿಪ್ಸ್ ಇಲ್ಲಿದೆ…
1 ನಿಮ್ಮ ಸ್ಕೆಡ್ಯೂಲ್ ಅಲ್ಲ, ಅವರ ಸ್ಕೆಡ್ಯೂಲ್ ಪ್ರಕಾರ ಟ್ರಾವೆಲ್ ಪ್ಲಾನ್ ಮಾಡಿ. ಅವರ ನಿದ್ದೆ ಟೈಮ್, ಊಟದ ಟೈಮ್ ಮನದಲ್ಲಿರಲಿ.
2 ಪಬ್ಲಿಕ್ ಟ್ರಾನ್ಸ್ಪೋರ್ಟ್ಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋದರೆ ಮಗು ಅಳುತ್ತದೆ, ಇತರರಿಗೆ ತೊಂದರೆಯಾಗುತ್ತಿದೆ ಎಂದೆಲ್ಲಾ ಯೋಚನೆ ಮಾಡಬೇಡಿ. ಆ ಜನರನ್ನು ನೀವೆಂದೂ ಭೇಟಿ ಮಾಡೋಡಿಲ್ಲ. ಮಕ್ಕಳೆಂದರೆ ಹಾಗೆ ಅಂತ ಅರ್ಥ ಮಾಡಿಕೊಳ್ತಾರೆ.
3 ಕೆಲವೊಮ್ಮೆ ರೂಲ್ಸ್ ಬ್ರೇಕ್ ಮಾಡಬಹುದು, ನೀವು ಹತ್ತು ನಿಮಿಷಕ್ಕೂ ಹೆಚ್ಚು ಸಮಯ ಮೊಬೈಲ್ ಕೊಡೋದಿಲ್ಲ. ಬಟ್ ಟ್ರಾವೆಲ್ ಮಾಡುವಾಗ ಇಪ್ಪತ್ತು ನಿಮಿಷ ಕೊಟ್ಟರೆ ತೊಂದರೆ ಇಲ್ಲ. ಕೆಲವು ಸ್ನ್ಯಾಕ್ಸ್ ತಿಂದರೆ ತಿನ್ನಲಿ ಬಿಡಿ.
4 ಹೊಸ ಆಟಿಕೆಗಳು, ಪುಸ್ತಕಗಳು ಕೆಲ ಹೊತ್ತು ಮಕ್ಕಳನ್ನು ಒಂದೇ ಕಡೆ ಕೂರುವಂತೆ ಮಾಡಬಹುದು.
5 ಆಗಾಗ ಟ್ರಾವೆಲ್ ಪಾಸ್ ಮಾಡಿ, ಹೊರಗೆ ಬಂದು ಒಂದೆರಡು ನಿಮಿಷ ಸುಧಾರಿಸಿಕೊಂಡು ಮತ್ತೆ ಕಾರ್ ಹತ್ತಿ