ಹೊಸದಿಗಂತ ಡಿಜಿಟಲ್ ಡೆಸ್ಕ್:
2 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ ಆರೋಪದ ಮೇಲೆ ಖ್ಯಾತ ಚಲನಚಿತ್ರ ನಿರ್ಮಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳು ಚಲನಚಿತ್ರೋದ್ಯಮದೊಂದಿಗೆ ಸಂಬಂಧ ಹೊಂದಿದ್ದ ಡಿಎಂಕೆ ಮಾಜಿ ಕಾರ್ಯಕರ್ತ ಜಾಫರ್ ಸಾದಿಕ್ ಅವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಭಾರತ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಅಕ್ರಮ ಮಾದಕ ದ್ರವ್ಯ ಸಾಗಣೆ ಜಾಲದಲ್ಲಿ ಸಾದಿಕ್ ಪ್ರಮುಖ ವ್ಯಕ್ತಿ ಎಂದು ಎನ್‌ಸಿಬಿ ಹೇಳಿದೆ. ಫೆಬ್ರವರಿ 29 ರಂದು ಶ್ರೀಲಂಕಾಕ್ಕೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದರು.
2 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಅಕ್ರಮವಾಗಿ ಈ ಪ್ರದೇಶಕ್ಕೆ ಕಳ್ಳಸಾಗಣೆ ಮಾಡಿರುವುದು ಪತ್ತೆಯಾಗಿದೆ. ಸಾದಿಕ್ 3,500 ಕಿಲೋಗ್ರಾಂಗಳಷ್ಟು ಸ್ಯೂಡೋಪೆಡ್ರಿನ್ಅನ್ನು 45 ಬಾರಿ ವಿದೇಶಕ್ಕೆ ಕಳುಹಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.