ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಜನತೆಗೆ ನೀರಿನ ಅಭಾವ ಕುರಿತಾಗಿ ಯಾವುದೇ ಆತಂಕ ಬೇಡ ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಜಲಾಶಯಗಳಲ್ಲಿ ಸದ್ಯ ಒಟ್ಟು 34 ಟಿಎಂಸಿಗಳಷ್ಟು ನೀರಿನ ಸಂಗ್ರಹವಿದೆ. ಒಟ್ಟು 1470 ಎಂಎಲ್‌ಡಿ ನೀರು ಪಂಪ್ ಮಾಡಲು ಅವಕಾಶವಿದೆ. ನಮ್ಮ ಸಾಮರ್ಥ್ಯಕ್ಕಿಂತ 20 ಟಿಎಂಸಿ ಹೆಚ್ಚು ನೀರು ಪಂಪ್ ಮಾಡುತ್ತಿದ್ದೇವೆ ಎಂದರು.
ಬೆಂಗಳೂರಿನ ಜನತೆಗೆ ನೀರಿನ ಕೊರತೆ ಕಾಡುವ ಬಗ್ಗೆ ಯಾವುದೇ ಆತಂಕಬೇಡ. ಜಲಕ್ಷಾಮ ಕಾಡದಂತೆ ವಿವಿಧ ಯೋಜನೆಗಳನ್ನು ಈಗಾಗಲೇ ರೂಪಿಸಲಾಗಿದೆ ಎಮದು ಅವರು ಹೇಳಿದರು.