ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಕುಳಿತು ಕೆಲಸ ಮಾಡುವವರ ಆಹಾರಕ್ರಮ ಸರಿ ಇಲ್ಲದಿದ್ದರೆ, ತೂಕ ಹೆಚ್ಚುವುದು, ಸೊಂಟದ ಸುತ್ತ ನೆರಿಗೆಗಳು ಕಾಣಿಸಿಕೊಳ್ಳುತ್ತದೆ, ಅಜೀರ್ಣ ಮುಂತಾದ ತೊಂದರೆಗಳು ಉಂಟಾಗಯುತ್ತದೆ. ಇಡೀ ದಿನ ಕುಳಿತು ಕೆಲಸ ಮಾಡುವವರ ಆಹಾರ ಕ್ರಮ ಹೇಗಿದ್ದರೆ ಒಳಿತು? ಇಲ್ಲಿದೆ ಉಪಯುಕ್ತ ಮಾಹಿತಿ.
ಬೆಳಗ್ಗೆ ಎದ್ದ ತಕ್ಷಣ ಬಾದಾಮಿಯಂತಹ ನಟ್ಸ್ ತಿನ್ನಬಹುದು. ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿಟ್ಟರೆ ಇನ್ನೂ ಉತ್ತಮ. ಸಾಂಪ್ರದಾಯಿಕ ದೋಸೆ ಚಟ್ನಿ, ಇಡ್ಲಿ ಸಾಂಬಾರ್ ಮತ್ತು ತರಕಾರಿ ಉಪ್ಪಿಟ್ಟು ಬೆಳಗಿನ ಉಪಾಹಾರಕ್ಕೆ ಉತ್ತಮ ಆಯ್ಕೆಗಳಾಗಿವೆ.
ಬೆಳಿಗ್ಗೆ ಕೇವಲ ಎಳನೀರು ಅಥವಾ ತಣ್ಣನೆಯ ಮಜ್ಜಿಗೆ ಕುಡಿದರೆ ಒಳ್ಳೇದು. ನೀವು ಹಸಿದಿದ್ದರೆ, ತಾಜಾ ಹಣ್ಣುಗಳು ಸೇವಿಸುವುದು ಸೂಕ್ತವಾಗಿದೆ. ಊಟ ಮತ್ತು ತಿಂಡಿಗಳ ನಡುವೆ ಹೆಚ್ಚು ಸಮಯ ಕಾಯುವುದು ಒಳ್ಳೆಯದಲ್ಲ. ಮಧ್ಯಾಹ್ನದ ಊಟಕ್ಕೆ ಅನ್ನ ಸಾಂಬಾರ್, ಪಲ್ಯ ಚಪಾತಿ ಮತ್ತು ಮೊಸರು. ತಿನ್ನುವುದು ಉತ್ತಮ.
ಸಂಜೆ ಹಣ್ಣು ಮತ್ತು ತರಕಾರಿ ಸಲಾಡ್‌ಗಳನ್ನ ತಿನ್ನುವುದು ಬಹಳ ಉತ್ತಮ.
ತಜ್ಞರ ಪ್ರಕಾರ, ನಮ್ಮ ಆಹಾರದಲ್ಲಿ ಪ್ರೊಟೀನ್ ಕೊರತೆಯಿದ್ದರೆ ಪದೇಪದೆ ಹಸಿವಾಗುತ್ತದೆ ಎನ್ನುತ್ತಾರೆ. ಪ್ರೋಟೀನ್ ನಮ್ಮ ಸ್ನಾಯುಗಳನ್ನು ಬಲಪಡಿಸುವುದರಿಂದ ಹಿಡಿದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುವವರೆಗೆ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ.