ಪಾಕ್ ಪರ ಘೋಷಣೆ ದೇಶದ್ರೋಹದ‌ ವಿಚಾರ, ತಕ್ಕ ಶಿಕ್ಷೆಯಾಗಬೇಕು: ಲೋಕಾಯುಕ್ತ ನಿವೃತ್ತ ನ್ಯಾ ಸಂತೋಷ್ ಹೆಗ್ಡೆ

ಹೊಸದಿಗಂತ , ಬಾಗಲಕೋಟೆ:

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ದೇಶದ್ರೋಹದ‌ ವಿಚಾರವಾಗಿದೆ‌. ಈ‌ರೀತಿ ಆಗಬಾರದಿತ್ತು. ಅದಕ್ಕೆ ತಕ್ಕ ಶಿಕ್ಷೆಯಾಗಬೇಕು ಎಂದುಲೋಕಾಯುಕ್ತ ನಿವೃತ್ತ ನ್ಯಾ ಸಂತೋಷ್ ಹೆಗ್ಡೆ ಅವರು ಹೇಳಿದರು.

ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಶಾಂತಿ, ಸೌಹಾರ್ದತೆ ಇರಬೇಕು. ದೇಶ ಮೊದಲು ಎನ್ನುವುದು ನನ್ನ ಮನಸ್ಸಿನಲ್ಲಿ ಇರಬೇಕು. ಅದು ಉಲ್ಲಂಘನೆಯಾದರೆ ಕಠಿಣ ಶಿಕ್ಷೆ ಆಗಬೇಕು ಎಂದು ಹೇಳಿದರು.

ಎಫ್ ಎಸ್ ಎಲ್ ವರದಿ ಬರುವ ಮುಂಚೆಯೇ ಕೆಲ ಸಚಿವರು ಘೋಷಣೆ ಕೂಗಿಲ್ಲ ಎಂದು ಸಮರ್ಥನೆಗೆ ಇಳಿದಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ ಇವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಸತ್ಯಕ್ಕೆ ಬೆಲೆ ಇಲ್ಲ. ನಾವು ಹೇಳಿದ್ದೆ ಸತ್ಯ ಎಂದು ತಿಳಿದುಕೊಂಡಿರುವ ಬಹಳಷ್ಟು ವ್ಯಕ್ತಿಗಳು ಇದ್ದಾರೆ. ಜನರನ್ನ ತಪ್ಪು ದಾರಿಯಲ್ಲಿ ತರಬಹುದು ಎನ್ನುವ ಪ್ರಯತ್ನ ನಡೆಯುತ್ತಿರುತ್ತವೆ. ಅವರು ಇವರನ್ನ ದೂರುತ್ತಾರೆ ಇವರು ಅವರನ್ನ ದೂರುತ್ತಾರೆ. ಯಾವುದೇ ವಿಚಾರ ಚರ್ಚೆ ನಡೆಯಬೇಕಾದರೆ ಅದರಲ್ಲಿ ಸತ್ಯ ಬಹಳ ದೂರ ಇದೆ ಎನ್ನುವುದು ನನ್ನ ಅಭಿಪ್ರಾಯ ಎಂದರು.

ಅವರು ಜೈಕಾರ ಹಾಕಿರುವ ಬಗ್ಗೆ ಟಿವಿಗಳಲ್ಲಿ ಕ್ಲಿಪ್ ತೋರಿಸಲಾಗಿದೆ. ತಪ್ಪು ಆಗಿದ್ರೆ ಆತನಿಗೆ ಶಿಕ್ಷೆ ಆಗುತ್ತೆ. ಅದಕ್ಕೆ ಸಚಿವರು ಅಂದಿಲ್ಲ ಅಂತ ಯಾಕೆ ಹೇಳಬೇಕು. ಇದಕ್ಕೆ ಯಾರಾದ್ರೂ ರಿಯಾಕ್ಷನ್ ಯಾಕೆ ಕೊಡಬೇಕಿತ್ತು? ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!