ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಎರಡು ವಿಮಾನ ನಿಲ್ದಾಣಗಳಲ್ಲಿ ಟರ್ಮಿನಲ್ಗಳ ನಿರ್ಮಾಣ ಸೇರಿದಂತೆ ದೇಶದಾದ್ಯಂತ 15 ವಿಮಾನ ನಿಲ್ದಾಣ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು. ಉತ್ತರ ಪ್ರದೇಶದ ಅಜಂಗಢದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನರೇಂದ್ರ ಮೋದಿ ಅವರು ವರ್ಚುವಲ್ ಪ್ಲಾಟ್ಫಾರ್ಮ್ ಮೂಲಕ ವಿಮಾನ ನಿಲ್ದಾಣ ಯೋಜನೆಗೆ ಚಾಲನೆ ನೀಡಿದರು.
ಮೋದಿ ಅವರು ಸುಮಾರು 9,800 ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಪುಣೆ, ಕೊಲ್ಹಾಪುರ, ಗ್ವಾಲಿಯರ್, ಜಬಲ್ಪುರ, ದೆಹಲಿ, ಲಖನೌ, ಅಲಿಗಢ, ಆಜಂಗಢ, ಚಿತ್ರಕೂಟ, ಮೊರಾದಾಬಾದ್, ಶ್ರವಸ್ತಿ ಹಾಗೂ ಆದಂಪುರ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಟರ್ಮಿನಲ್ಗಳನ್ನು ಮೋದಿ ಉದ್ಘಾಟಿಸಿದರು. ಹುಬ್ಬಳ್ಳಿ, ಬೆಳಗಾವಿ, ಆಂಧ್ರಪ್ರದೇಶ ಮತ್ತು ಕರ್ನಾಟಕದ ಕಡಪ ವಿಮಾನ ನಿಲ್ದಾಣಗಳಲ್ಲಿ ನೂತನ ಟರ್ಮಿನಲ್ಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.