ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳದ ಸಂದೇಶ್‍ಖಾಲಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ತೃಣಮೂಲ ಕಾಂಗ್ರೆಸ್‍ನಿಂದ (TMC) ಅಮಾನತಾಗಿರುವ ಶೇಖ್ ಶಹಜಹಾನ್‍ನ (Sheikh Shahjahan) ಕೇಂದ್ರೀಯ ತನಿಖಾ ದಳದ (CBI) ಕಸ್ಟಡಿಯನ್ನು ಮತ್ತೆ ನಾಲ್ಕು ದಿನಗಳವರೆಗೆ ನ್ಯಾಯಾಲಯ (Court) ವಿಸ್ತರಿಸಿದೆ.
ಪಶ್ಚಿಮ ಬಂಗಾಳದ (West Bengal) ಬಸಿರ್‍ಹತ್‍ನ ನ್ಯಾಯಾಲಯ ಕೇಂದ್ರೀಯ ಸಂಸ್ಥೆಯ ಅರ್ಜಿಯ ಆಧಾರದ ಮೇಲೆ ಈ ಆದೇಶ ನೀಡಿದೆ.
ಕೋಲ್ಕತ್ತಾ ಹೈಕೋರ್ಟ್‍ನ ಆದೇಶದ ಮೇರೆಗೆ ತನಿಖೆಯ ವರ್ಗಾವಣೆಯೊಂದಿಗೆ ಮಾರ್ಚ್ 6 ರಂದು ಸಿಬಿಐ ಶೇಖ್ ಷಹಜಹಾನ್‍ನನ್ನು ಕಸ್ಟಡಿಗೆ ಪಡೆದುಕೊಂಡಿತ್ತು. ಇದೀಗ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿ ನಾಲ್ಕು ದಿನಗಳ ಕಾಲ ಕಸ್ಟಡಿಯನ್ನು ವಿಸ್ತರಿಸಿದೆ. ಅಲ್ಲದೇ ಮಾ.14 ರಂದು ವಿಚಾರಣೆಗೆ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿದೆ.