ಹೊಸದಿಗಂತ ವರದಿ, ಗೋಕರ್ಣ:
ಸುಮುದ್ರ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಮೂವರು ಯುವತಿಯರನ್ನು ಜೀವರಕ್ಷ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಭಾನುವಾರ ಮಧ್ಯಾಹ್ನ ಕುಡ್ಲೆ ಬೀಚ್ ನಲ್ಲಿ ನಡೆದಿದೆ.
ಬೆಂಗಳೂರು ಜಯನಗರದ ನಿವಾಸಿಗಳಾದ ಸ್ಮಿತಾ ರವಿಚಂದ್ರನ(೨೩), ನಿಹಾರಿಕಾ ಗಿರಿ(೨೨),ಪವಿತ್ರ ಸುಂದರ(೨೨)ಜೀವಾಪಾಯದಿಂದ ಪಾರಾಗಿ ಬಂದ ಯುವತಿಯರಾಗಿದ್ದು, ಸಮುದ್ರದಲ್ಲಿ ಈಜಾಡಲು ತೆರಳಿದ ವೇಳೆ ಸುಳಿಕೆ ಸಿಲುಕಿ ಅಪಾಯದಲ್ಲಿದ್ದರು.
ಇದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿಗಳಾದ ನವೀನ ಅಂಬಿಗ,ಮಂಜುನಾಥ ಅಂಬಿಗರ ತಕ್ಷಣ ಧಾವಿಸಿ ಜೀವಕಾಪಾಡಿದ್ದಾರೆ.ಕುಡ್ಲೆ ವಾಟರ್ ಸ್ಪೋಟ್ಸ ಮೈಸ್ಟಿಕ್ , ಸಿಬ್ಬಂದಿಗಳು ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ.