ಹೊಸ ದಿಗಂತ ವರದಿ, ಮಂಗಳೂರು:
ಸಂಸದೆ ಸುಮಲತಾ ಅವರ ಚುನಾವಣಾ ಪ್ರಚಾರದಲ್ಲಿ ತಾನು ಪಾಲ್ಗೊಳ್ಳುತ್ತಿದ್ದೇನೆ ಎಂಬ ಸುಳಿವನ್ನು ನಟ ದರ್ಶನ್ ತೂಗುದೀಪ ನೀಡಿದ್ದಾರೆ.
ಭಾನುವಾರ ಕುತ್ತಾರಿನ ದೆಕ್ಕಾಡುವಿನಲ್ಲಿರುವ ಕೊರಗಜ್ಜ ಸ್ವಾಮಿ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಸಂದರ್ಭ ಸುದ್ದಿಗಾರರ ಜೊತೆ ಅವರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಸಂದರ್ಭ ಸಂಸದೆ ಸುಮಲತಾ ಪರ ಪ್ರಚಾರ ವಿಚಾರದ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಹೆತ್ತ ತಾಯಿನ ಎಂದೂ ಬಿಟ್ಟು ಕೊಡಲಾಗುವುದಿಲ್ಲ. ನಿಮ್ಮ ಮನೇಲಿ ನಿಮ್ಮ ತಾಯಿಯನ್ನ ನೀವು ಬಿಟ್ಟುಬಿಡುತ್ತೀರಾ? ಸುಮಲತಾ ಅಮ್ಮ ಎಂದಿಗೂ ಅಮ್ಮನೇ ಎಂದು ಹೇಳಿದ್ದಾರೆ.