ಹೊಸದಿಗಂತ ಡಿಜಿಟಲ್ ಡೆಸ್ಕ್:
ವರದಕ್ಷಿಣೆ ವಿಚಾರವಾಗಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಟ್ರಕ್ ಚಾಲಕ ಜಾವೇದ್ ಮುಲ್ಲಾ ತನ್ನ ಪತ್ನಿ ಜಿಬ್ಬು ಅವರಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಮನೆಯಿಂದ ಹಣ ತರುವಂತೆ ಜಾವೇದ್ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಕಳೆದ ತಿಂಗಳು ತನ್ನ ಹೆಂಡತಿಯನ್ನು ತನ್ನ ಊರಿಗೆ ಕಳುಹಿಸಿ 20,000 ತರುವಂತೆ ಹೇಳಿದ್ದನಂತೆ.
ಜಾವೇದ್ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರಿಂದ ಜಿಬ್ಬು ಮನೆಯವರು ನಮ್ಮ ಬಳಿ ಅಷ್ಟು ಹಣವಿಲ್ಲ ಎಂದು ಹೇಳಿದ್ದರು. ಜಾವೇದ್ ತನ್ನ ಪತ್ನಿ ಜಿಬ್ಬು ಅವರನ್ನು ಕೊಲೆ ಮಾಡಿದ ಆರೋಪ ಇದೀಗ ಕೇಳಿ ಬಂದಿದೆ. ಜಿಬ್ಬು ಅವರ ಕಿರಿಯ ಸಹೋದರ ಅಲ್ಲಾವುದ್ದೀನ್ ಈ ಆರೋಪ ಮಾಡಿದ್ದಾರೆ.
ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.